ರೈಲ್ವೆ ಹಳಿಯಲ್ಲಿ ದೋಷ ಪತ್ತೆ: ಪಡುಬಿದ್ರಿ ಬಳಿ ವೆಲ್ಡ್ ಫೈಲ್ಯೂರ್; ಟ್ರ್ಯಾಕ್ ಮೆಂಟೈನರ್ ಪ್ರದೀಪ್ ಶೆಟ್ಟಿ ಸಮಯ ಪ್ರಜ್ಞೆ ತಪ್ಪಿಸಿತು ಭಾರಿ ಅವಘಡ!

ಮಂಗಳೂರು: ಕೊಂಕಣ ರೈಲ್ವೆ ಟ್ರ್ಯಾಕ್ ನಲ್ಲಿ ರೈಲ್ವೆ ಹಳಿಯಲ್ಲಿ ಭಾರಿ ಲೋಪ ಪತ್ತೆಯಾದ ಪರಿಣಾಮ ಭಾರಿ ಅವಘಡ ತಪ್ಪಿದೆ.

ಉಡುಪಿ ಜಿಲ್ಲೆಯ ಪಡುಬಿದ್ರೆ ಮತ್ತು ಇನ್ನಂಜೆಯ ಪ್ರದೇಶದ ಮಧ್ಯೆ ರೈಲ್ವೆ ಹಳಿಯಲ್ಲಿ ವೆಲ್ಡ್ ಫೈಲ್ಯೂರ್ ನಡೆದಿತ್ತು. ಟ್ರ್ಯಾಕ್ ಮೆಂಟೈನರ್ ಪ್ರದೀಪ್ ಶೆಟ್ಟಿ ಅವರು ಈ ದೋಷವನ್ನು ರಾತ್ರಿ ಪತ್ತೆ ಹಚ್ಚಿದ್ದರು. ಇದರಿಂದ ಈ ಟ್ರ್ಯಾಕ್ ನಲ್ಲಿ ಸಾಗುತ್ತಿದ್ದ ರೈಲು ಅವಘಡ ಆಗುವ ಸಂಭವ ವಿತ್ತು. ಇದನ್ನು ಪ್ರದೀಪ್ ಶೆಟ್ಟಿ ಪತ್ತೆ ಹಚ್ಚಿದ ಮಾಹಿತಿ ನೀಡಿದ ಪರಿಣಾಮ ಕೂಡಲೇ ಇದರ ದುರಸ್ತಿ ಕಾರ್ಯವನ್ನು ನಡೆಸಲಾಯಿತು.

ಪ್ರದೀಪ್ ಶೆಟ್ಟಿ ಅವರು ಸಮಯಕ್ಕೆ ಸರಿಯಾಗಿ ದೋಷ ಪತ್ತೆ ಹಚ್ಚಿದ ಹಿನ್ನೆಲೆಯಲ್ಲಿ ಅವರಿಗೆ ರೂ 25 ಸಾವಿರ ನಗದು ಬಹುಮಾನ ನೀಡಿ ಉಡುಪಿ ಸೀನಿಯರ್ ಇಂಜಿನಿಯರ್ ಗೋಪಾಲಕೃಷ್ಣ ಅವರು ಗೌರವಿಸಿದರು. ಈ ಸಂದರ್ಭದಲ್ಲಿ ರೈಲ್ವೆ ಅಧಿಕಾರಿಗಳಾದ ಮೋಹನ್, ರವಿರಾಜ್ ಉಪಸ್ಥಿತರಿದ್ದರು

Latest Indian news

Popular Stories