ರಾಯಚೂರು: ಮದ್ಯ ಮಾರಾಟ, ಸಾಗಾಟ ನಿಷೇಧ

ರಾಯಚೂರು,ಏ.೧೫(ಕ.ವಾ):- ಏಪ್ರಿಲ್ ೧೭ರಂದು ಮಸ್ಕಿ ವಿಧಾನ ಸಭಾ ಕ್ಷೇತ್ರದ ಉಪಚುನಾವಣೆ ಮತದಾನ ನಡೆಯಲಿರುವ ಕಾರಣ ಒಣ ದಿನಗಳೆಂದು ಘೋಷಿಸಬೇಕಾದ ಹಿನ್ನೆಲೆಯಲ್ಲಿ ಜಿಲ್ಲೆಯ ಲಿಂಗಸೂಗೂರು ಸಿಂಧನೂರು ಮಾನ್ವಿ.

ಹಾಗೂ ತಾಲೂಕಿನದ್ಯಾಂತ ೨೦೨೧ರ ಏಪ್ರಿಲ್ ೧೫ರ ಸಂಜೆ ೭ರಿಂದ ಏಪ್ರಿಲ್ ೧೭ ಮಧ್ಯ ರಾತ್ರಿ ೧೨ಗಂಟೆಯವರಿಗೆ ಮಸ್ಕಿ ವಿಧಾನ ಸಭೆ ಕ್ಷೇತ್ರದ ಗಡಿ ಪ್ರದೇಶದಿಂದ ೦೫ ಕಿ.

ಮೀ ವ್ಯಾಪ್ತಿಯ ಹೊರವಲಯದಲ್ಲಿ ಬರುವ ಎಲ್ಲಾ ರೀತಿಯ ಮದ್ಯ ಮಾರಾಟದ ಅಂಗಡಿಗಳು ಅಂದರೆ ಬ್ರಾಂಡಿ, ಬೀರ್, ಬಾರ್, ಚಿಲ್ಲರೆ.

ಸಗಟು ಮದ್ಯ ಮಾರಾಟ ಹಾಗೂ ಸಾಗಟ ಮಾಡುವುದನ್ನು ನಿಷೇಧಿಸಿ ಜಿಲ್ಲಾ ದಂಡಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಆರ್. ವೆಂಕಟೇಶ್ ಕುಮಾರ್ ಅವರು ಡ್ರೆöÊ ಡೇ ಎಂದು ಆದೇಶ ಹೊರಡಿಸಿದ್ದಾರೆ.

ಇದಕ್ಕೂ ಪೂರ್ವ ಏ.೧೪ರ ಬುಧವಾರದಿಂದ ರಾಯಚೂರು, ಮಾನ್ವಿ, ಸಿರವಾರ ಹಾಗೂ ದೇವದುರ್ಗ ತಾಲೂಕುಗಳಲ್ಲಿ ಮದ್ಯ ಮಾರಾಟ ಹಾಗೂ ಸಾಗಾಣ ಕೆಯನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿತ್ತು.

ಜಿಲ್ಲಾಧಿಕಾರಿಯವರು ಕರ್ನಾಟಕ ಅಬಾಕಾರಿ ಸನ್ನದ್ದುಗಳು ನಿಯಮವಳಿ ೧೯೬೭ ರನ್ವಯ ಈ ಆದೇಶ ಹೊರಡಿಸಿದ್ದಾರೆ.

Latest Indian news

Popular Stories