ಲಿಂಗಸಗೂರು: ಮಠಕ್ಕೆ ನುಗ್ಗಿ ಶ್ರೀಗಳಿಗೆ ಬೆದರಿಕೆ ಹಾಕಿ ದರೋಡೆ

ರಾಯಚೂರು, ಜುಲೈ 05: ಲಿಂಗಸುಗೂರು (Lingsugur) ಪಟ್ಟಣದ ಶ್ರೀ ವಿಜಯ ಮಹಾಂತೇಶ್ವರ ಶಾಖಾ ಮಠದ ಪೀಠಾದಿಪತಿಗಳನ್ನು ಹೆದರಿಸಿ, ದರೋಡೆ ಮಾಡಲಾಗಿದೆ. ಗುರುವಾರ ಮಧ್ಯರಾತ್ರಿ ಡಕಾಯಿತಿರ ಗ್ಯಾಂಗ್ ಭಕ್ತರ ಸೋಗಿನಲ್ಲಿ ಮಠಕ್ಕೆ ಬಂದಿದೆ. ಮಠದಲ್ಲಿದ್ದ ಓಬ್ಬರೇ ಇದ್ದ ಸಿದ್ದಲಿಂಗ ಸ್ವಾಮೀಜಿಯವರನ್ನು ದುಷ್ಕರ್ಮಿಗಳು ಎಬ್ಬಸಿದ್ದಾರೆ. ಬಳಿಕ ಸಿದ್ದಲಿಂಗ ಸ್ವಾಮೀಜಿಯವರಿಗೆ ದುಷ್ಕರ್ಮಿಗಳು ಬೆದರಿಕೆ ಹಾಕಿದ್ದಾರೆ.

ನಂತರ ಮಠದಲ್ಲಿದ್ದ ಸುಮಾರು 80 ಗ್ರಾಂ ತೂಕದ ಚಿನ್ನ ಹಾಗೂ 7 ಕೆಜಿ ಬೆಳ್ಳಿ ಆಭರಣಗಳು, ಸುಮಾರು‌ 20 ಲಕ್ಷ ನಗದು ಸೇರಿ‌ದಂತೆ 35 ಲಕ್ಷ ಮೌಲ್ಯದ ಬೆಲೆ ಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ. ಸಿದ್ಧಲಿಂಗ ಸ್ವಾಮೀಜಿ ಪೊಲೀಸರಿಗೆ ದೂರು ನೀಡಿದ್ದಾರೆ.

ಪೊಲೀಸ್​ ಇನ್ಸ್​​ಸ್ಪೆಕ್ಟರ್​​ ಪುಂಡಲಿಕ್​ ಪಟತ್ತರ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಹೆಚ್ಚುವರಿ ಪೊಲೀಸ್​ ವರಿಷ್ಠಾಧಿಕಾರಿ ಹರೀಶಬಾಬು, ಡಿವೈಎಸ್​ಪಿ ದತ್ತಾತ್ರೇಯ ಕಾರ್ನಾಡ್​​ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

Latest Indian news

Popular Stories