730 ದಿನ ಪುರೈಸಿದ ರಾಯಚೂರಿನ ಏಮ್ಸ್ ಹೋರಾಟ

ರಾಯಚೂರು: ಜಿಲ್ಲೆಗೆ ಏಮ್ಸ್ ಮಂಜೂರು ಮಾಡುವಂತೆ ಆಗ್ರಹಿಸಿ ರಾಯಚೂರು ಜಿಲ್ಲಾ ಏಮ್ಸ್ ಹೋರಾಟ ಸಮಿತಿ ವತಿಯಿಂದ ನಡೆಯುತ್ತಿರುವ ಧರಣಿ ಇಂದು 730ನೇ ದಿನಕ್ಕೆ ಕಾಲಿಟ್ಟಿದೆ.

ಇನ್ನು ಎರಡು ದಿನ ಕಳೆದರೆ ಎರಡು ವರ್ಷವಾಗಲಿದೆ. ಐತಿಹಾಸಿಕವಾದ ಹೋರಾಟ ನಡೆಯುತ್ತಿದ್ದರೂ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ. ರಾಜ್ಯ ಸರ್ಕಾರ ಇದುವರೆಗೆ ಮೂರು ಪತ್ರಗಳನ್ನು ಬರೆದರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಧರಣಿಯಲಲಿ ಪಾಲ್ಗೊಂಡು ಮಾತನಾಡಿದ ನಿವೃತ್ತ ಪ್ರಾಂಶುಪಾಲ ಜಗದೀಶ ಪೂರ್ತಿಪ್ಲಿ, ಲೋಕಸಭಾ ಚುನಾವಣೆಯ ನಂತರ ಕೇಂದ್ರದಲ್ಲಿ ಯಾವುದೇ ಸರ್ಕಾರ ಅಧಿಕಾರಕ್ಕೆ ಬದರೂ ಪುನಃ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಿಯೋಗ ಕರೆದುಕೊಂಡು ರಾಯಚೂರಿನಲ್ಲಿಯೇ ಏಮ್ಸ್ ಸ್ತಾಪಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು. ಸ್ಥಳೀಯ ಸಚಿವರು, ಶಾಸಕರು ಹೋರಾಟಕ್ಕೆ ಬೆಂಬಲಿಸಿ ಸರ್ಕಾರದ ಮೇಲೆ ಒತ್ತಡ ಹಾಕಲು ನೆರವಾಗಬೇಕು ಎಂದು ಕೋರಿದರು.

ಧರಣಿಯಲ್ಲಿ ಏಮ್ಸ್ ಹೋರಾಟ ಸಮಿತಿಯ ಸಹ ಸಂಚಾಲಕ ಅಶೋಕ ಕುಮಾರ್ ಜೈನ್, ಕಾಮರಾಜ ಪಾಟೀಲ, ಎಸ್ ತಿಮ್ಮಾರೆಡ್ಡಿ, ಶ್ರೀನಿವಾಸ ನಾಗಲದಿನ್ನಿ, ಗುರುರಾಜ ಕುಲಕರ್ಣಿ, ರಮೇಶ ಕಲ್ಲೂರಕರ, ಮಲ್ಲನಗೌಡ ಹದ್ದಿನಾಳ, ವೀರಭದ್ರಯ್ಯ ಸ್ವಾಮಿ, ವೀರೇಶ ಬಾಬು, ಮಹೇಂದ್ರ ಸಿಂಗ್, ನರಸಪ್ಪ ಬಾಡಿಯಾಲ, ಜಶವಂತರಾವ್ ಕಲ್ಯಾಣಕರಿ, ಬಾಬು ಕವಿತಾಳ, ನಾಸಿರ ಹೊಸುರ, ಸಚಿತ ಗುಡಗುಂಟಿ ಹಾಜರಿದ್ದರು.

Latest Indian news

Popular Stories