ರಾಯಚೂರು: ‘ಚಿಂಚಾ ಪಾನಕ’ ವಿತರಣೆ

ಆಯುಷ್ ಇಲಾಖೆಯಿಂದ ಪರಿಚಯಿಸಿದ ‘ಚಿಂಚಾ ಪಾನಕ’ ವನ್ನು ರಾಯಚೂರಿನ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಅವರು ಸಿಬ್ಬಂದಿಗೆ ವಿತರಿಸಿದರು. ಈ ವೇಳೆ ಸಹಾಯಕ ಆಯುಕ್ತ ಸುಭಾಷ ಸಂಪಗಾವಿ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಶಂಕರಗೌಡ ಎಸ್.ಪಾಟೀಲ, ಡಾ. ಡಾ.ಬಸವರಾಜ ಕಟ್ಟಿ ಪಾಲ್ಗೊಂಡಿದ್ದರು.

ಆರೋಗ್ಯಕರ ಆಯುಷ್ ‘ಚಿಂಚಾ ಪಾನಕ ಪರಿಚಯ’
ರಾಯಚೂರು: ಜಿಲ್ಲೆಯಲ್ಲಿ ಬೇಸಿಗೆಯಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ದೇಹ ತಂಪಾಗಿಸಿಕೊಳ್ಳಲು ಜಿಲ್ಲಾ ಆಯುಷ್ ಇಲಾಖೆಯಿಂದ ‘ಚಿಂಚಾ ಪಾನಕ’ ಪರಿಚಯಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಗುರುವಾರ ಸರ್ಕಾರಿ ನೌಕರರ, ಸಿಬ್ಬಂದಿಗೆ ಹಾಗೂ ಸಾರ್ವಜನಿಕರಿಗೆ ವಿತರಿಸಲಾಯಿತು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆಯುಷ್ ಇಲಾಖೆಯ ವತಿಯಿಂದ ಆಯೋಜಿದ್ದ ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಸಹಾಯಕ ಆಯುಕ್ತ ಸುಭಾಷ ಸಂಪಗಾವಿ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಶಂಕರಗೌಡ ಎಸ್.ಪಾಟೀಲ ಚಾಲನೆ ನೀಡಿದರು.

ಈ ವೇಳೆ ಆಯುಷ್ ಅಧಿಕಾರಿ ಡಾ. ಡಾ.ಬಸವರಾಜ ಕಟ್ಟಿ ಮಾತನಾಡಿ, ಜೀರ್ಣಕ್ರಿಯೆಗೆ, ಮಲಬದ್ಧತೆಗೆ ‘ಚಿಂಚಾ ಪಾನಕ’ ಅತ್ಯುತ್ತಮ ಔಷಧಿಯಾಗಿದೆ. ದೇಹದ ಉಷ್ಣಾಂಶ ಕಡಿಮೆ ಮಾಡಿ ಬಾಯಾರಿಕೆ ನೀಗಿಸುತ್ತದೆ. ಇದು ಮನೆಯಲ್ಲಿ ಸಿಗುವಂತಹ ಸಾಮಗ್ರಿಗಳಿಂದ ತಯಾರಿಸಿಕೊಳ್ಳಬಹುದು ಎಂದು ತಿಳಿಸಿದರು.

ಪಂಚ ಕರ್ಮ ಘಟಕದ ಡಾ.ನವೀನ ಎನ್.ಡಿ ಮಾತನಾಡಿ, ಚಿಂಚಾ ಪಾನಕ ತಯಾರಿಸುವ ಬಗ್ಗೆ ತಿಳಿಸಿ ಹುಣಸಿ ಹಣ್ಣು 100 ಗ್ರಾಂ, ಬೆಲ್ಲದ ಪುಡಿ 400 ಮಿಲಿ, ಜೀರಿಗೆ ಪುಡಿ 10 ಗ್ರಾಂ, ಕಾಳು ಮೆಣಸಿನ ಪುಡಿ 5 ಗ್ರಾಂ, ಸೈಂದವ ಲವಣ 5 ಗ್ರಾಂ ತೆಗೆದುಕೊಂಡು ಹುಣಸಿ ಹಣ್ಣು ಅಗತ್ಯ ಪ್ರಮಾಣ ನೀರಿನಲ್ಲಿ ಇಡೀ ರಾತ್ರಿ ನೆನಸಿಡಬೇಕು. ಮರುದಿನ ಬೆಳಿಗ್ಗೆ ಅದನ್ನು ಶುದ್ಧವಾದ ಕೈಗಳಿಂದ ಚೆನ್ನಾಗಿ ಹಿಸಕಿ ಸೋಸಿಕೋಬೇಕು ಅದನ್ನು ಒಂದು ಬಾಟಲಿನಲ್ಲಿ ತುಂಬಿಸಕೊಳ್ಳಬೇಕು. 02 ರಿಂದ 03 ಲಿಟರ್ ನೀರಿಗೆ ಮೇಲೆ ತಿಳಿಸಿದ ಎಲ್ಲಾ ಮಿಶ್ರಣಗಳನ್ನು ಸೇರಿಸಿ ಕಲಿಸಬೇಕು. ಪ್ರತಿ ವ್ಯಕ್ತಿ 50 ರಿಂದ 100 ಮಿ.ಲಿ ಈ ಪಾನಕವನ್ನು ಸೇವಿಸಬೇಕು ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಡಾ.ಮೊಹಮ್ಮದ ಅಮೀನುದ್ದಿನ್ ಅಸ್ಲಂ, ಡಾ.ರಾಜೇಂದ್ರ ಬೆನಕಿನಾಳ್, ಡಾ.ಪೂಜಾ, ಸಹಾಯಕ ಆಡಳಿತ ಅಧಿಕಾರಿ ಅಸ್ಮಾಬೇಗಂ, ಕಚೇರಿ ಅಧೀಕ್ಷಕ ನರಸಪ್ಪ, ವಿವಿಧ ಇಲಾಖೆಯ ಸಿಬ್ಬಂದಿ ಇದ್ದರು.

Latest Indian news

Popular Stories