ರಾಯಚೂರು: ಮಹಿಳೆಯೊಬ್ಬರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸಗೂರು ಪಟ್ಟಣದಲ್ಲಿ ನಡೆದಿದೆ.
ಲಿಂಗಸಗೂರಿನ ಯರಡೋಣಿ ನಿವಾಸಿ 33 ವರ್ಷದ ವಿಜಯಲಕ್ಷ್ಮೀ ಕೊಲೆಯಾದ ಮಹಿಳೆ. ತಡರಾತ್ರಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಸೀರೆಯಿಂದ ಉಸಿರುಗಟ್ಟಿಸಿ, ಕಲ್ಲಿನಿಂದ ಜಜ್ಜಿ ವಿಜಯಲಕ್ಷ್ಮೀ ಅವರನ್ನು ಕೊಲೆ ಮಾಡಲಾಗಿದೆ.ಪರಿಚಯದವರೇ ವಿಜಯಲಕ್ಷ್ಮೀ ಅವರನ್ನು ಹತ್ಯೆ ಮಡಿರುವ ಅನುಮನ ವ್ಯಕ್ತವಾಗಿದೆ. ಲಿಂಗಸಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.