ರಾಜ್ಯದಲ್ಲಿ ಕಾಂಗ್ರೆಸ್ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದೆ : ಸಿಎಂ ಬೊಮ್ಮಾಯಿ ಕಿಡಿ

ಬೆಂಗಳೂರು : ಶಿವಮೊಗ್ಗದ ರಾಗಿಗುಡ್ಡದಲ್ಲಿ ನಿನ್ನೆ ನಡೆದ ಗಲಭೆಯನ್ನು ನಿಯಂತ್ರಿಸುವಲ್ಲಿ ರಾಜ್ಯ ಕಾಂಗ್ರೆಸ್ ವಿಫಲವಾಗಿದೆ ಎಂದು
ಸಿಎಂ ಬಸವರಾಜ್ ಬೊಮ್ಮಾಯಿ ಕಿಡಿ ಕಾರಿದ್ದಾರೆ.ಈದ್ ಮಿಲಾದ್ ಸಂದರ್ಭದಲ್ಲಿ ಕಲ್ಲು ತೂರಾಟ ನಡೆಸಿ ಗಲಭೆ ಸೃಷ್ಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸರ್ಕಾರ ಲಾಠಿಚಾರ್ಜ್​ ನಡೆಸುವಂತಹ ಪರಿಸ್ಥಿತಿಗೆ ಬರಬಾರದಾಗಿತ್ತು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದೆ. ಶಿವಮೊಗ್ಗ ಸೂಕ್ಷ್ಮ ನಗರ, ಹಿಂದೆಯೂ ಇಂತಹ ಘಟನೆಗಳು ನಡೆದಿವೆ. ಧಾರ್ಮಿಕ ಕಾರ್ಯಕ್ರಮಗಳ ವೇಳೆ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ. ಈದ್ ಮಿಲಾದ್ ಮೆರವಣಿಗೆ ವೇಳೆ ಗಲಾಟೆ ಪ್ರಕರಣದ ಹಿಂದೆ ಓಲೈಕೆ ರಾಜಕಾರಣ ಇದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗಾಂಧಿ ಕಂಡ ಕನಸು ಕರ್ನಾಟಕದಲ್ಲಿ ನನಸು ಅಂತ ಸರ್ಕಾರದ ಜಾಹೀರಾತು ವಿಚಾರವಾಗಿ ಮಾತನಾಡಿದ ಅವರು, ಮಾಡುವುದೆಲ್ಲಾ ಗಾಂಧಿ ವಿರೋಧಿ ನೀತಿ. ಸುಳ್ಳು ಹೇಳುವುದರಿಂದ ಪ್ರಾರಂಭ ಆಗುತ್ತದೆ. ಸುಳ್ಳು ಹೇಳಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಸಿಕ್ಕಲ್ಲೆಲ್ಲಾ ಮಧ್ಯದಂಗಡಿ ಶುರು ಮಾಡಿದ್ದಾರೆ. ಪ್ರತಿ ಗ್ರಾಮ ಪಂಚಾಯತ್​ನಲ್ಲಿ ಮದ್ಯದಂಗಡಿ ತೆರಯುತ್ತಿದ್ದಾರೆ. ಹೇಳುವುದಕ್ಕಷ್ಟೇ ಶಾಂತಿ, ಮಾಡುವುದೆಲ್ಲಾ ಇಂತಹ ಕ್ರಿಯೆ ಎಂದು ಕಿಡಿಕಾರಿದ್ದಾರೆ.

Latest Indian news

Popular Stories