ಗಣೆಶೋತ್ಸವ ಆಚರಣೆಗೆ ನಿರ್ಬಂಧ: ಪ್ರಮೋದ್ ಮುತಾಲಿಕ್ ಬಿಜೆಪಿ ವಿರುದ್ಧ ಕೆಂಡಾಮಂಡಲ

ಬೆಂಗಳೂರು: ಕೋವಿಡ್ 3ನೇ ಅಲೆಯ ನೆಪದಲ್ಲಿ, ಗಣೇಶೋತ್ಸವ ಆಚರಣೆಗೆ ನಿರ್ಬಂಧ ವಿಧಿಸಿರುವ ಸರ್ಕಾರದ ಕ್ರಮ ಖಂಡಿ ಆ. 21ರಂದು ರಾಜ್ಯದ ಎಲ್ಲ ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗುವುದು’ ಎಂದು ಪ್ರಮೋದ್ ಮುತಾಲಿಕ್ ತಿಳಿಸಿದ್ಧಾರೆ.

ಸರ್ಕಾರದ ನಿರ್ಧಾರವನ್ನು ಶ್ರೀರಾಮ ಸೇನೆ ಸಂಘಟನೆ ವಿರೋಧಿಸುತ್ತದೆ. ಈ ಆದೇಶವನ್ನು ಕೂಡಲೇ ವಾಪಸ್ ತೆಗೆದುಕೊಳ್ಳಬೇಕು. ತೆಲಂಗಾಣ, ಮಹಾರಾಷ್ಟ್ರ ಸರ್ಕಾರಗಳು ಆರು ತಿಂಗಳ ಮೊದಲೇ ಈ ಬಗ್ಗೆ ಸ್ಪಷ್ಟಪಡಿಸಿವೆ. ಆದರೆ, ಇಲ್ಲಿನ ಸರ್ಕಾರ ಕಡಿಮೆ ಅವಧಿಯಲ್ಲಿ ಆದೇಶ ಹೊರಡಿಸಿದೆ. ಹಿಂದೂ ದೇವಸ್ಥಾನ ಮತ್ತು ಜಾತ್ರೆಗಳಿಗೆ ಮಾತ್ರ ನಿರ್ಬಂಧ ಹಾಕುತ್ತಿರುವುದೇಕೆ? ಇತರ ಆಚರಣೆಗೆ ನಿರ್ಬಂಧ ವಿಧಿಸಿಲ್ಲ. ಶಾಲಾ– ಕಾಲೇಜು ಆರಂಭಕ್ಕೆ ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ. ಹಿಂದೂಗಳ ಆಚರಣೆಗೇಕೆ ನಿರ್ಬಂಧ ಹಾಕುತ್ತಿದೆ?’ ಎಂದು ಕೇಳಿದರು.

‘ನಿಯಮಗಳನ್ನು ಪಾಲಿಸುತ್ತೇವೆ. ಆದರೆ, ಅವೈಜ್ಞಾನಿಕ ಆದೇಶ ಹಿಂಪಡೆಯಬೇಕು. ಬಿಜೆಪಿ ನಾಯಕರು ಲಕ್ಷಾಂತರ ಜನರ ಭಾವನೆ ಗೌರವಿಸುತ್ತಿಲ್ಲ. ಇದು ಸರಿಯಲ್ಲ. ಕೆಲವು ಅಧಿಕಾರಿಗಳು ಸರ್ಕಾರವನ್ನು ದಾರಿ ತಪ್ಪಿಸುತ್ತಿದ್ದಾರೆ. ಅದಕ್ಕಾಗಿ ಗಣೇಶೋತ್ಸವಕ್ಕೆ ನಿರ್ಬಂಧ ಹೇರಿದ್ದಾರೆ. ರಾಜ್ಯದ ಮೂರು ಮಹಾನಗರ ಪಾಲಿಕೆ ಚುನಾವಣೆ ನಡೆಸಲಾಗುತ್ತಿದೆ. ಕೇಂದ್ರ ಸಚಿವರು ಜನಾಶೀರ್ವಾದ ಯಾತ್ರೆ ನಡೆಸುತ್ತಿದ್ದಾರೆ. ಆಗ ಕೊರೊನಾ ಹರಡುವುದಿಲ್ಲವೇ’ ಎಂದು ಖಾರವಾಗಿ ಪ್ರಶ್ನಿಸಿದರು.

‘ಹಿಂದುತ್ವದ ಹೆಸರಿನಲ್ಲಿ ಮಂತ್ರಿಗಳಾದವರು, ಸಂಪ್ರದಾಯಕ್ಕೆ ಭಂಗವಾದಾಗ ಮಾತನಾಡುತ್ತಿಲ್ಲವೇಕೆ?’ ಎಂದು ಕೇಳಿದರು.

Latest Indian news

Popular Stories