ತಮಿಳುನಾಡಿನ ಥೇಣಿ ಜಿಲ್ಲೆಯಲ್ಲಿ 500 ವರ್ಷ ಹಳೆಯ ಕನ್ನಡ ಶಾಸನ ಪತ್ತೆ

ಕನ್ನಡದ ರಾಜರು ದೇಶದ ವಿವಿಧ ಭಾಗಗಳನ್ನು ಆಳಿದ್ದಾರೆ, ಅದರ ಗುರುತುಗಳು ಇಂದಿಗೂ ಅಲ್ಲಲ್ಲಿ ಪತ್ತೆಯಾಗುತ್ತಲೇ ಇವೆ. ಈಗ 500 ವರ್ಷಗಳ ಹಳೆಯ ಶಾಸನವೊಂದು ತಮಿಳುನಾಡಿನ ಥೇಣಿ ಜಿಲ್ಲೆಯಲ್ಲಿ ಪತ್ತೆಯಾಗಿದೆ.

ಥೇಣಿ ಜಿಲ್ಲೆಯ ಸಿಲ್ವಾರಪಟ್ಟಿಯಲ್ಲಿರುವ ವಿನಾಯಕ ದೇವಸ್ಥಾನದಲ್ಲಿ 500 ವರ್ಷಗಳಷ್ಟು ಹಳೆಯದಾದ ಕನ್ನಡ ಭಾಷೆಯ ಶಾಸನ ಪತ್ತೆಯಾಗಿದೆ. ಈ ದೇವಾಲಯದ ನೆಲಮಾಳಿಗೆಯಲ್ಲಿ ರಾಮನಾಥಪುರಂ ಪುರಾತತ್ವ ಸಂಶೋಧನಾ ಸಂಸ್ಥೆಯ ಅಧ್ಯಕ್ಷ ರಾಜಗುರು ನೇತೃತ್ವದಲ್ಲಿ ಸಂಶೋಧಕರು ತನಿಖೆ ನಡೆಸಿದಾಗ ಈ ಶಾಸನ ಪತ್ತೆಯಾಗಿದೆ. ಶಾಸನ ಬರೆದಿರುವ ಕಲ್ಲು 3 ಅಡಿ ಎತ್ತರ, 2.5 ಅಡಿ ಅಗಲ ಮತ್ತು ಅರ್ಧ ಅಡಿ ದಪ್ಪವಿದೆ. ಅಲ್ಲಿ ಗೋಡೆಗೆ ಶಾಸನವನ್ನು ಅಂಟಿಸಲಾಗಿದೆ.

ಕನ್ನಡ ಭಾಷೆ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ, ಬೋರ್ಡ್​ ಬದಲಾವಣೆಗೆ ಡೆಡ್​​ಲೈನ್​ ನೀಡಿದ ಸರ್ಕಾರ- ಇಲ್ಲಿದೆ ಮಾಹಿತಿ ಶಾಸನದಲ್ಲಿ ಇರುವುದೇನು? ಈ ಕಲ್ಲಿನ ಮೇಲ್ಭಾಗದಲ್ಲಿ ಶಿವಲಿಂಗ, ಸೂರ್ಯ ಮತ್ತು ಚಂದ್ರರನ್ನು ಕೆತ್ತಲಾಗಿದೆ. ಅವುಗಳ ಕೆಳಗೆ ‘ಶ್ರೀ ಹಾಲಪಯ್ಯ ಗೌಡರ ಗ್ರಾಮ ವೇಲ್ಪರರ ಪಟ್ಟ’ ಎಂದು ಬರೆಯಲಾಗಿದೆ. ಪುರಾತತ್ವಶಾಸ್ತ್ರಜ್ಞರಾದ ನೂರ್ಸಕಿಪುರಂ ಶಿವಕುಮಾರ್, ಶಿಕ್ಷಕ ಬೋಧಕ ಮುರುಗೇಶಪಾಂಡಿಯನ್, ಅರುಪ್ಪುಕ್ಕೊಟ್ಟೈ ಎಸ್‌ಪಿಕೆ, ಕಾಲೇಜು ಇತಿಹಾಸ ಪ್ರಾಧ್ಯಾಪಕ ರಾಜಪಾಂಡಿ ಅವರು ಪರೀಕ್ಷೆ ಮಾಡಿದ್ದು ಶಾಸನವು 500 ವರ್ಷಗಳಷ್ಟು ಹಳೆಯದು ಎಂದು ದೃಢಪಡಿಸಿದ್ದಾರೆ

Latest Indian news

Popular Stories