ಜೇನು ಕುರುಬರ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಕೊಡಗು ಮತ್ತು ಮೈಸೂರು ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ. ಸ್ವತಂತ್ರ ಪೂರ್ವದಿಂದಲೂ ನಮ್ಮ ಸಮುದಾಯವು ತುಳಿತಕ್ಕೆ ಒಳಗಾಗಿದೆ. ಪ್ರಮುಖವಾಗಿ ನಮ್ಮ ಸಮುದಾಯಕ್ಕೆ ಉತ್ತಮ ಗುಣಮಟ್ಟದ ಶಿಕ್ಷಣ, ಹುಣಸೂರು ತಾಲ್ಲೂಕಿನಲ್ಲಿ ಜೇನುಕುರುಬರ ಕಚೇರಿಯನ್ನು ಮರುಸ್ಥಾಪಿಸಿ P.V.T.G ಅನುದಾನವನ್ನು ಜಿ.ಕೆ ಕಚೇರಿಯ ಮೂಲಕವೇ ನಮ್ಮ
ಸಮುದಾಯಕ್ಕೆ ತಲುಪಿಸುವುದು. ಅರಣ್ಯ ಹಕ್ಕು ಕಾಯ್ದೆ 2012 ರ ತಿದ್ದುಪಡಿ ಕಾಯ್ದೆ ಪ್ರಕಾರ ಒಂದೊಂದು ಕುಟುಂಬಕ್ಕೆ ತಲಾ 5 ಎಕರೆ ಕೃಷಿ ಭೂಮಿಯನ್ನು ಮಂಜೂರು ಮಾಡುವಂತೆ
ಮಾನ್ಯ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಶಾಸಕರಾದ ಶ್ರೀ ಎ.ಎಸ್.ಪೊನ್ನಣ್ಣರವರ ನೇತೃತ್ವದಲ್ಲಿ ಕೊಡಗು ಜಿಲ್ಲಾ ಜೇನು ಕುರುಬರ ಸಂಘದ ಉಪಾಧ್ಯಕ್ಷರಾದ ಜಿ.ಕೆ.ಮುತ್ತಮ್ಮ ಅವರು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಈ ಸಂಧರ್ಭದಲ್ಲಿ ಸಂಘದ
ಪದಾಧಿಕಾರಿಗಳು ಉಪಸ್ಥಿತರಿದ್ದರು.