ಎಚ್‌ಕೆಇ ಸಂಸ್ಥೆಗೆ ಆಯ್ಕೆ; ವಾಲಿ ಸನ್ಮಾನ

ಹೈದರಾಬಾದ್‌ ಕರ್ನಾಟಕ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಸದಸ್ಯರಾಗಿ ಎರಡನೇ ಬಾರಿಗೆ ಆಯ್ಕೆಯಾಗಿರುವ ರಜನೀಶ್‌ ವಾಲಿ ಅವರನ್ನು ನಗರದಲ್ಲಿ ವಿವಿಧ ಸಂಘಟನೆಗಳು ಸೋಮವಾರ ಸತ್ಕರಿಸಿದವು.

ಸೂರ್ಯ ನಮಸ್ಕಾರ ಸಂಘ, ನವೀನ್‌ ಪಬ್ಲಿಕ್ ಸ್ಕೂಲ್ ಮತ್ತು ಪಿಯು ಕಾಲೇಜು ವತಿಯಿಂದ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ರಜನೀಶ ವಾಲಿ, ನಾನು ಎರಡನೇ ಬಾರಿ ಎಚ್‌ಕೆಇ ಸಂಸ್ಥೆ ಆಡಳಿತ ಮಂಡಳಿಯ ಸದಸ್ಯನಾಗಿ ಆಯ್ಕೆಯಾಗಿರುವುದಕ್ಕೆ ಸಂತಸವಾಗಿದೆ. ಇದಕ್ಕೆ ಎಲ್ಲರ ಪ್ರೀತಿ, ವಿಶ್ವಾಸವೇ ಕಾರಣ. ಸಂಸ್ಥೆ ನನ್ನ ಮೇಲಿಟ್ಟಿರುವ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸುವೆ. ಸಂಸ್ಥೆಯು ನನಗೆ ನೀಡಿದ ಈ ಸೇವೆಯ ಅವಕಾಶಕ್ಕೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.

ಸೂರ್ಯ ನಮಸ್ಕಾರ ಸಂಘದ ಅಧ್ಯಕ್ಷ ಕಾಮಶೆಟ್ಟಿ ಚಿಕ್ಕಬಸೆ, ಸಂಘದ ಪದಾಧಿಕಾರಿಗಳಾದ ರಾಜಕುಮಾರ ಮಂಗಲಗಿ, ಶ್ರೀಧರ ಜಾಧವ, ಜಿ.ಎಂ. ಮಕಾಲೆ, ವಿನೀತ್ ಪಸರ್ಗೆ, ಭದ್ರು ಸ್ವಾಮಿ ಹಾಜರಿದ್ದರು.

Latest Indian news

Popular Stories