
Udupi
ಧರ್ಮಸ್ಥಳಕ್ಕೆ ಹೋಗುವ ಬಸ್ ಹತ್ತುತ್ತಿದ್ದ ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಸರ ಕಿತ್ತೊಯ್ದ ಕಳ್ಳರು
ಬೆಳ್ತಂಗಡಿ:ಇಲ್ಲಿನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಮಂಗಳವಾರ ಸಂಜೆ ಧರ್ಮಸ್ಥಳಕ್ಕೆ ಹೋಗುವ ಬಸ್ ಹತ್ತುತ್ತಿದ್ದ ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕಳ್ಳರು ಕಿತ್ತೊಯ್ದ ಘಟನೆ ನಡೆದಿದೆ. ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಬಸ್ಸು ಹತ್ತುವ ವೇಳೆ ಮಹಿಳೆಯನ್ನು ದೂಡಿ ಕೊರಳಿನಲ್ಲಿದ್ದ ಚಿನ್ನದ ಸರವನ್ನು ಕಿತ್ತು ಓಡಿಹೋಗಿದ್ದಾರೆ.ಕಳವಾದ ಚಿನ್ನದ ಸರವು 36 ಗ್ರಾಂ ತೂಕವನ್ನು ಹೊಂದಿತ್ತು. ಅದರ ಮೌಲ್ಯ ₹ 1.44 ಲಕ್ಷ ಆಗಬಹುದು ಎಂದು ಉಜಿರೆ ಗ್ರಾಮದ ವಾರಿಜ ಟಿ (53) ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.




