UdupiFeatured Story

ಕಾರ್ಕಳ: ಗುರು-ಶಿಷ್ಯ ಗುದ್ದಾಟ ಶೆಟ್ರ ಮೇಲಾಟ!

ಕಾರ್ಕಳ ವಿಧಾನ ಸಭಾ ಕ್ಷೇತ್ರ ಬಿಜೆಪಿ ಮತ್ತು ಸುನೀಲ್ ಕುಮಾರ್ ಅವರ ಭದ್ರ ಕೋಟೆ ಇಲ್ಲಿ ಕಾಂಗ್ರೆಸ್’ಗೆ ಅಭ್ಯರ್ಥಿ ಕೊರತೆ ಹಾಗಾಗಿ ಇಲ್ಲಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಗೆಲುವು ಕನಸಿನ ಮಾತು ಎಂಬಂತ ಸ್ಥಿತಿ ಇತ್ತು. ಈಗ ನೋಡಿದರೆ ಕಾರ್ಕಳದಲ್ಲಿ ಬಿಜೆಪಿ ಆಕ್ಸಿಜನ್ ಹಿಡಿದು ಉಸಿರಾಟ ನಡೆಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಸುನೀಲ್ ಕುಮಾರ್ ಮುಂದೆ ಸೆಣಸಲು ಕಾಂಗ್ರೆಸ್ ಅಷ್ಟೊಂದು ವರ್ಚಸ್ಸು ಇಲ್ಲದ ನಾಯಕತ್ವವನ್ನು ಕಣಕ್ಕಿಳಿಸಲಿದೆ ಸುನೀಲ್ ಕುಮಾರ್ ಸುಲಭವಾಗಿ ಗೆಲುವು ಸಾಧಿಸುತ್ತಾರೆ ಎಂಬ ಬಿಜೆಪಿ ಲೆಕ್ಕಚಾರ ಇದೀಗ ಚುನಾವಣಾ ಸನ್ನಿಹಿತದಲ್ಲಿ ಬುಡ ಮೇಲಾಗಿದೆ. ಬಿಜೆಪಿಯ ಹಿಂದುತ್ವದ ಫಯರ್ ಬಾಂಡ್ ಎಂದೇ ಖ್ಯಾತಿ ಪಡೆದಿದ್ದ ಸುನೀಲ್’ಗೆ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್‌ಮುತಾಲಿಕ್ ಸಡ್ಡು ಹೊಡೆದಿದ್ದು ಪ್ರಖರ ಹಿಂದುತ್ವದ ಹೆಸರಿನಲ್ಲಿ ಸುನೀಲ್ ಕುಮಾರ್ ಅವರ ಮೇಲೆ ಭ್ರಷ್ಟಾಚಾರದ ಆರೋಪಗಳನ್ನು ಮಾಡುತ್ತ ಚುನಾವಣಾ ಕಣದಲ್ಲಿ ತೀವ್ರ ಪೈಪೋಟಿ ಸೃಷ್ಟಿಸಿದ್ದಾರೆ. ಗುರುವಿನ ಹಠ ಶಿಷ್ಯನಿಗೆ ತಲೆನೋವಾಗುದರೊಂದಿಗೆ ಮತ ವಿಭಜನೆಯ ಭೀತಿ ಕಾಡುತ್ತಿದೆ.

images 2023 05 07T100826.930 Udupi, Featured Story
ಮುನಿಯಾಲು ಉದಯ ಕುಮಾರ್ ಶೆಟ್ಟಿ

ಇನ್ನೊಂದೆಡೆ 2018 ರ ಪ್ರಬಲ ಅಭ್ಯರ್ಥಿಯಾಗಿದ್ದ ಮುನಿಯಾಲು ಉದಯ ಕುಮಾರ್ ಶೆಟ್ಟಿ ಕಣಕ್ಕಿಳಿದಿರುವುದು ಕಾಂಗ್ರೆಸ್ ನಲ್ಲಿ ಹೊಸ ಸಂಚಲನ ಮೂಡಿಸಿದ್ದು ಬಿಜೆಪಿಗೆ ಮುತಾಲಿಕ್ ತಲೆನೋವಿನ ಮುಂದೆ ಉದಯ ಕುಮಾರ್ ಶೆಟ್ಟಿ ದೊಡ್ಡ ಬಂಡೆಯಾಗಿ ಕಾಣಿಸುತ್ತಿರುವುದು ಮಾತ್ರ ಸುಳ್ಳಲ್ಲ.

ಬಿಲ್ಲವರ ಪ್ರಾಬಲ್ಯ ಹೊಂದಿರುವ ಕಾರ್ಕಳದಲ್ಲಿ ಆಡಳಿತರೂಢ ಬಿಜೆಪಿ ಸರಕಾರದೊಂದಿಗೆ ಬಹಿರಂಗವಾಗಿ ಮುನಿಸಿಕೊಂಡಿದ್ದು ಇತಿಹಾಸ. ಆ ಮುನಿಸು ಚುನಾವಣೆಯಲ್ಲೂ ಮುಂದುವರಿದರೆ ಬಿಜೆಪಿಗೆ ಈ ಬಾರಿ ಕಾರ್ಕಳ ಕ್ಷೇತ್ರ ಕನಸಾಗಿ ಉಳಿಯಲಿದೆ. ಮುನಿಯಾಲು ಉದಯ ಕುಮಾರ್ ಶೆಟ್ಟಿ ಬಂಟ ಅಭ್ಯರ್ಥಿಯಾಗಿರುವುದರಿಂದ ಬಂಟರ ಮತ ಸೇರಿದಂತೆ ಇನ್ನಿತರ ಸಮುದಾಯಗಳ ಮತ ಸೆಳೆಯುವ ಸಾಧ್ಯತೆ ಇದೆ. ಅಲ್ಪ ಸಂಖ್ಯಾತ ಮತಗಳು ಕೂಡ ಕಾಂಗ್ರೆಸ್’ಗೆ ಗಾಡ್ ಗಿಫ್ಟ್‌.

ಇನ್ನು ಅತ್ಯಂತ ಪ್ರಮುಖ ಅಂಶವೆಂದರೆ ಹಿಂದುತ್ವವಾದವನ್ನು ನೆಚ್ಚಿಕೊಂಡಿರುವ ಜನರಿಗೂ ಎರಡು ಆಯ್ಕೆ ಇರುವುದರಿಂದ ಪ್ರಮೋದ್ ಮುತಾಲಿಕ್ ಸುನೀಲ್ ಕುಮಾರ್’ಗೆ ದುಃಸ್ವಪ್ನವಾಗಿ ಕಾಡಲಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಬಹುಮತ ಪಡೆಯಲಿದೆ ಎಂದು ಈಗಾಗಲೇ ಬಹುತೇಕ ಸಮೀಕ್ಷೆಗಳು ಬೆಳಕು ಚೆಲ್ಲಿದೆ. ಈ ಹಿನ್ನಲೆಯಲ್ಲಿ ಕ್ಷೇತ್ರದಲ್ಲಿ ಸರಕಾರ ಇರುವ ಪಕ್ಷದ ಅಭ್ಯರ್ಥಿ ಗೆದ್ದರೆ ಕ್ಷೇತ್ರಕ್ಕೆ ಅನುಕೂಲವಾಗಬಹುದೆಂದು ಜನ ತಮ್ಮ ಮತಭಿಪ್ರಾಯ ಬದಲಾಯಿಸಿದರೂ ಅಚ್ಚರಿಯಿಲ್ಲ.

ಒಟ್ಟಿನಲ್ಲಿ ನೋಡುವುದಾರೆ ಕಾರ್ಕಳ ಕ್ಷೇತ್ರದಲ್ಲಿ ಪ್ರಸ್ತುತ ಬಿಜೆಪಿ ಏಕಪಕ್ಷೀಯವಾಗಿ ಗೆಲ್ಲುವ ಸ್ಥಿತಿಯಲ್ಲಿ ಇಲ್ಲ. ಇಲ್ಲಿ ಪರಿಸ್ಥಿತಿ ಬದಲಾಗಿದೆ. ಮತದಾರ ಸ್ವಲ್ಪ ಲೆಕ್ಕಚಾರ ಬದಲಾಯಿಸಿದ್ರು ಬಿಜೆಪಿಯ ಭದ್ರಕೋಟೆ ಎಂದು ಬಿಂಬಿತ ಕಾರ್ಕಳ ಶೆಟ್ರಾ ಪಾಲಾಗಲಿದೆ…..

ಮುಂದುವರಿಯುತ್ತದೆ…

  1. ಕುಂದಾಪುರ ಕ್ಷೇತ್ರ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button