ಮಲ್ಪೆ: ಲಾರಿಯಿಂದ ಗ್ರಾನೈಟ್ ಜಾರಿ ಬಿದ್ದು ಇಬ್ಬರು ಕಾರ್ಮಿಕರು ದಾರುಣ ಸಾವು

ಮಲ್ಪೆ: ಲಾರಿಯೊಳಗೆ ಗ್ರಾನೈಟ್ ಜಾರಿ ಬಿದ್ದ ಪರಿಣಾಮ ಇಬ್ಬರು ಒರಿಸ್ಸಾ ಮೂಲಕ ಕಾರ್ಮಿಕರು ಮೃತಪಟ್ಟ ಘಟನೆ ಮಲ್ಪೆ ಸಮೀಪದ ತೊಟ್ಟಂ ಕರಾವಳಿ ಯುವಕ ಮಂಡಲದ ಬಳಿ ಇಂದು ಮಧ್ಯಾಹ್ನ ನಡೆದಿದೆ.

ಒರಿಸ್ಸಾದ ರಾಜ್ಯದ ಬಾಬುಲ್ಲ(35) ಹಾಗೂ ಭಾಸ್ಕರ(35) ಮೃತ ಕಾರ್ಮಿಕರು. ಮನೆಯೊಂದಕ್ಕೆ ತರಲಾದ ಗ್ರಾನೈಟ್ನ್ನು ಲಾರಿಯಿಂದ ಇಳಿಸು ತ್ತಿದ್ದರು. ಈ ವೇಳೆ ಗ್ರಾನೈಟ್ ಜಾರಿ ಕಾರ್ಮಿಕರ ಮೇಲೆ ಬಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡು ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟರೆಂದು ತಿಳಿದುಬಂದಿದೆ.

ಸ್ಥಳಕ್ಕೆ ಮಲ್ಪೆ ಪೊಲೀಸರು ಆಗಮಿಸಿದ್ದಾರೆ.

IMG 20230914 WA0045 Udupi
IMG 20230914 WA0046 Udupi

Latest Indian news

Popular Stories