Udupi

ಮಲ್ಪೆ: ಚೂರಿ ಇರಿತ ಪ್ರಕರಣ ದಾಖಲು

ಮಲ್ಪೆ: ಯುವಕನೊರ್ವನಿಗೆ ಚಾಕು ಇರಿದ ಕುರಿತು ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದರ.

ದೂರಯದಾರರಾದ ಮಂಜುನಾಥ (28) ಇವರು  ಸುಮಾರು 4 ವರ್ಷದಿಂದ  ಮಲ್ಪೆ ಬಂದರಿನಲ್ಲಿ ಬೋಟಿನಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿರುತ್ತಾರೆ. ಪ್ರತಿದಿನ ಊಟ ಮುಗಿದ ಬಳಿಕ ಬಾಪುತೋಟ ದಕ್ಕೆಯಲ್ಲಿ ನಿಂತಿರುವ ಸನ್ಮಾನ್‌ ಬೋಟಿನಲ್ಲಿ ಮಲಗಲು ಹೋಗುತ್ತಿದ್ದರು. ಅದರಂತೆ ನವೆಂಬರ್ 18 ರ ರಾತ್ರಿ ಊಟ ಮಾಡುವ ತಯಾರಿಯಲ್ಲಿರುವಾಗ ಸನ್ಮಾನ್‌ ಬೋಟಿನ ಕೆಲಸಗಾರ ಅನಿಲ್‌ ಎಂಬುವನು ದೂರುದಾರರೊಂದಿಗೆ ಮದ್ಯ ಸೇವನೆ ಮಾಡಲು ಬರುವಂತೆ ತಿಳಿಸಿದ್ದು ಅದರಂತೆ ಪಿರ್ಯಾದಿದಾರರು ಸನ್ಮಾನ್‌ ಬೋಟಿಗೆ ಹೋಗಿದ್ದು, ಬೋಟಿನಲ್ಲಿ ಕೀರ್ತಿ, ಅನಿಲ್‌ ಮತ್ತು ದೂರುದಾರರು ಸೇರಿ ಮದ್ಯ ಸೇವನೆ ಮಾಡುತ್ತಿರುವಾಗ ರಾತ್ರಿ ಸಮಯ 10:30 ಗಂಟೆಗೆ ಅನಿಲ್‌ ಮತ್ತು ಕೀರ್ತಿ ರವರಿಗೆ ಬೋಟಿನಲ್ಲಿ ಕೆಲಸ ಮಾಡುವ ವಿಚಾರಕ್ಕೆ ಜಗಳ ಆಗಿರುತ್ತದೆ.

ಆ ಸಮಯ ಕೀರ್ತಿ ಎಂಬಾತನು ಬಿಯರ್‌ ಬಾಟಲಿಯಿಂದ ಅನಿಲ್‌ ಎಂಬುವನ ತಲೆ ಹೊಡೆದಿರುತ್ತಾನೆ ನಂತರ ಅನಿಲ್‌  ಬೋಟಿನ  ಸ್ಟೇರಿಂಗ್‌ ಬಳಿಗೆ ಓಡಿ ಹೋಗಿ ಚಾಕುವನ್ನು ತಂದಿದ್ದು ಅಷ್ಟರಲ್ಲಿ ಕೀರ್ತಿ ಎಂಬಾತನು ಬೋಟಿನಿಂದ ಓಡಿ ಹೋಗಿರುತ್ತಾನೆ. ಆ ಸಮಯ ಅನಿಲ್‌ ಚಾಕು ಸಮೇತ ಬಂದವನೆ ದೂರುದಾರಿಗೆ ಕೊಲ್ಲುವ ಉದ್ದೇಶದಿಂದ ಚಾಕುವನ್ನು ಕುತ್ತಿಗೆಯ ಎಡ ಭಾಗಕ್ಕೆ ಹಾಕಿರುವ ಕುರಿತು ಆರೋಪಿಸಲಾಗಿದೆ. ಕೂಡಲೇ ಬಲಕೈನಿಂದ ಚಾಕು ಹಿಡಿದು ತಪ್ಪಿಸಿಕೊಂಡಿದ್ದು ಇದರಿಂದ ದೂರುದಾರರು ಕುತ್ತಿಗೆಯ ಎಡಭಾಗಕ್ಕೆ ಮತ್ತು ಬಲಕೈ ಹೆಬ್ಬರಳು ಹಾಗೂ ತೋರು ಬೆರಳಿನ ಮದ್ಯ ಭಾಗಕ್ಕೆ ರಕ್ತ ಗಾಯವಾಗಿರುತ್ತಾದೆ.

ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ: 156/2024 , ಕಲಂ:352, 109  BNS ನಂತೆ ಪ್ರಕರಣ ದಾಖಲಾಗಿರುತ್ತದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button