ಉಡುಪಿ : ಕರ್ಕಶ ಹಾರ್ನ್ – ಖಾಸಗಿ ಬಸ್ ಚಾಲಕನ ವಿರುದ್ಧ ದೂರು ದಾಖಲು

ಉಡುಪಿ: ಕರ್ಕಶ ಹಾರ್ನ್ ಬಳಸೊದ ಖಾಸಗಿ ಬಸ್ ಚಾಲಕನ ವಿರುದ್ಧ ದೂರು ದಾಖಲಾಗಿದೆ.

ಉಡುಪಿ ಸಂಚಾರ ಪೊಲೀಸ್ ಠಾಣೆಯ ಉಪನೀರಿಕ್ಷರು ಸ್ವಯಂ ಪ್ರೇರಿತ ದೂರು ದಾಖಲಿಸಿದ್ದು ಜೂನ್ 26 ರಂದು ರೌಂಡ್ಸ್‌ ಕರ್ತವ್ಯದಲ್ಲಿರುವಾಗ ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಲಯನ್ಸ್‌ ಸರ್ಕಲ್‌ ಬಳಿ ಖಾಸಗಿ ಬಸ್ ಚಾಲಕ ಅಲ್ಬರ್ಟ್‌ ಕ್ಯಾಸ್ತಲಿನೋ ಎಂಬಾತನು ಬಸ್ಸಿನ ಹಾರ್ನ್‌ ನಿಂದ ಕರ್ಕಶವಾದ ಶಬ್ಧವನ್ನು ಹೊರ ಹೊಮ್ಮಿಸಿ ಸಾರ್ವಜನಿಕರಿಗೆ ಉಪದ್ರವವನ್ನು ಉಂಟು ಮಾಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 118/2024 ಕಲಂ: 290 ಐಪಿಸಿ ಮತ್ತು 194ಎಫ್ ಐಎಂವಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

Latest Indian news

Popular Stories