Udupi

ಶ್ರದ್ಧಾ ಭಕ್ತಿಯಿಂದ ಉದ್ಘಾಟನೆಗೊಳ್ಳಬೇಕಿದ್ದ ರಾಮ ಮಂದಿರಕ್ಕೆ ಬಿಜೆಪಿಯಿಂದ ರಾಜಕೀಯ ಟಚ್: ಪದ್ಮರಾಜ್ ಆರೋಪ

ಮಂಗಳೂರು: ಶ್ರದ್ಧಾ ಭಕ್ತಿಯಿಂದ ಉದ್ಘಾಟನೆಗೊಳ್ಳಬೇಕಿರುವ ರಾಮಮಂದಿರಕ್ಕೆ ಬಿಜೆಪಿಯವರು ರಾಜಕೀಯ ಟಚ್‌ ನೀಡುತ್ತಿದ್ದಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರೋಪಿಸಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಪದ್ಮರಾಜ್, ಅಯೋಧ್ಯೆಯಲ್ಲಿ ವಿವಾದ ಇದ್ದದ್ದು ನಿಜ. ಆದರೆ ಅದನ್ನು ನ್ಯಾಯಾಲಯ ಸರಿಪಡಿಸಿದೆ. ನ್ಯಾಯಾಲಯದ ತೀರ್ಪನ್ನು ಪ್ರತಿಯೊಬ್ಬರೂ ಗೌರವಿಸಬೇಕಿದೆ. ಆದರೆ ಬಿಜೆಪಿ ಮಾತ್ರ ಈ ವಿಚಾರವನ್ನಿಟ್ಟು ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು.

ಹುಬ್ಬಳ್ಳಿಯಲ್ಲಿ ವ್ಯಕ್ತಿಯೋರ್ವನ ಬಂಧನ ವಿಚಾರವಾಗಿ ಬಿಜೆಪಿ ಮತ್ತೆ ರಾಜಕೀಯ ಮಾಡತೊಡಗಿದೆ. ಆದರೆ ಆತನ ವಾರಂಟ್ ಹೊರಡಿಸಲ್ಪಟ್ಟ ಕ್ರಿಮಿನಲ್ ಆರೋಪಿ. ಆತನನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆಗೂ ರಾಮಮಂದಿರ ಉದ್ಘಾಟನೆಗೂ ಸಂಬಂಧವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಆದರೆ ಈ ವಿಚಾರವನ್ನು ಇಲ್ಲಿಯ ಬಿಜೆಪಿ ಶಾಸಕರು ರಾಜಕೀಯ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button