ಉಡುಪಿ – ಕಾಸರಗೋಡು 400KV ವಿದ್ಯುತ್ ಲೈನ್ ವಿರೋಧಿಸಿ ಪ್ರತಿಭಟನೆ

ಉಡುಪಿ – ಕಾಸರಗೋಡು 400KV ವಿದ್ಯುತ್ ಲೈನ್ ವಿರೋಧಿಸಿ ಉಡುಪಿ ಜಿಲ್ಲೆಯ ಕಾರ್ಕಳದ ಇನ್ನಾ ಗ್ರಾಮದಲ್ಲಿ ರೈತರು‌ ಪ್ರತಿಭಟನೆ ನಡೆಸಿದರು. ಈ ಯೋಜನೆಯಿಂದಾಗಿ ರೈತರ ಕೃಷಿ ಭೂಮಿ, ಮನೆ, ತೋಟ ನಾಶವಾಗಲಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

1001230773 Udupi

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ರೈತರ ಅಹವಾಲು ಸ್ವೀಕರಿಸಿದರು.

ಈ ವೇಳೆ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಅರುಣ್, ಕಾರ್ಕಳದ ಉಪ ವಿಭಾಗಧಿಕಾರಿ ಎಸ್. ರಶ್ಮಿ, ಕಾರ್ಕಳ ತಹಶಿಲ್ದಾರ್ ನರಸಪ್ಪ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.

Latest Indian news

Popular Stories