ಶಿರೂರು ಹಾಡುಹಗಲಲ್ಲಿ ಮನೆಗೆ ನುಗ್ಗಿ ಕಳ್ಳತನ

ಬೈಂದೂರು:ಹಾಡು ಹಗಲಲ್ಲಿ ಮನೆಯ ಬಾಗಿಲು ಮುರಿದು ಒಳನುಗ್ಗಿ ಮೂರು ಲಕ್ಷಕ್ಕೂ ಅಧಿಕ ಚಿನ್ನಾಭರಣ ಕದ್ದಯ್ದ ಘಟನೆ ಶಿರೂರಿನಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.

ಇಲ್ಲಿನ ಶಿರೂರು ಮಾರ್ಕೆಟ್‌ ಬಳಿ ವಾಸಿಸುವ ಠಾಕೇಶ್‌ ಪಟರ್ಗಾ ದಂಪತಿಗಳು ವೃತ್ತಿಯಲ್ಲಿ ಶಿಕ್ಷಕರಾಗಿದ್ದಾರೆ. ಮದ್ಯಾಹ್ನ ಊಟ ಮುಗಿಸಿ ಕಾಲೇಜಿಗೆ ಮರಳಿದ ಸಮಯ ನೋಡಿ ಹಿಂಬಾಗಿಲಿನಿಂದ ನುಗ್ಗಿದ ಕಳ್ಳರು 32 ಗ್ರಾಂ ಮಾಂಗಲ್ಯ ಸರ ,10 ಗ್ರಾಂ ಕಿವಿಯೋಲೆ, 100 ಗ್ರಾಂ ಬೆಳ್ಳಿ ಹಾಗೂ 1000 ರೂಪಾಯಿ ನಗದು ಕದ್ದೊಯ್ದಿದ್ದಾರೆ.

ಇವರ ಮನೆಯ ಬಳಿಕ ಪಕ್ಕದ ಮನೆಗೆ ತೆರಳಿ ಅಲ್ಲೂ ಕೂಡ ಬಾಗಿಲು ಒಡೆಯುತ್ತಿರುವಾಗ ಮನೆಯವರು ನೋಡಿ ಕೂಗಿಕೊಂಡ ಬಳಿಕ ಕಳ್ಳರು ಪರಾರಿಯಾಗಿದ್ದಾರೆ.
ಕೆಲವೆ ದಿನಗಳ ಹಿಂದೆ ಈಮನೆಯ ಸಮೀಪ ಸಂಜೆ ವೇಳೆ ಮನೆಯ ಬಾಗಿಲು ಒಡೆದು ಸುಮಾರು 35 ಲಕ್ಷಕ್ಕೂ ಅಧಿಕ ಚಿನ್ನಾಭರಣ ಕದ್ದೊಯ್ದ ಬೆನ್ನಲೇ ಈ ರೀತಿ ಘಟನೆ ನಡೆದಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಶಿರೂರಿನಲ್ಲಿ ಹೆಚ್ಚುತ್ತಿರುವ ಗಾಂಜಾ ಪ್ರಕರಣ,ಅನಧಿಕೃತ ಚಟುವಟಿಕೆಗಳು ಇಂತಹ ಪ್ರಕರಣಕ್ಕೆ ಇನ್ನಷ್ಟು ದಾರಿ ಮಾಡಿಕೊಡುತ್ತಿದೆ.ಹೀಗಾಗಿ ಆರಕ್ಷಕ ಇಲಾಖೆ ಅನಧೀಕೃತ ಚಟುವಟಿಕೆಗೆ ಕಡಿವಾಣ ಹಾಕುವ ಜೊತೆಗೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕೆಂಬುವುದು ಸಾರ್ವಜನಿಕರ ಅಭಿಪ್ರಾಯಾವಗಿದೆ.ಘಟನಾ ಸ್ಥಳಕ್ಕೆ ಬೆರಳಚ್ಚು ತಂಡ,ಶ್ವಾನದಳ ಆಗಮಿಸಿದೆ.ಬೈಂದೂರು ಆರಕ್ಷರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Latest Indian news

Popular Stories