Udupi

ಉಡುಪಿಯಲ್ಲೂ ಆ್ಯಂಟಿ ಕಮ್ಯುನಲ್ ವಿಂಗ್ ಸ್ಥಾಪಿಸಬೇಕು – ಸುಂದರ್ ಮಾಸ್ತರ್

ಮಂಗಳೂರಿನಲ್ಲಿ ಎಂಟಿ ಕಮ್ಯುನಲ್ ವಿಂಗ್ ಸ್ಥಾಪಿಸಿರುವುದನ್ನು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಸ್ವಾಗತಿಸುತ್ತದೆ.ಹಲವಾರು ವರ್ಷಗಳಿಂದ ಕೋಮು ದಳ್ಳುರಿಯಿಂದ ನಲುಗಿರುವ ಮಂಗಳೂರಿನ ಜನತೆಗೆ ಸ್ವಲ್ಪವಾದರೂ ನಿಟ್ಟುಸಿರು ಬಿಡುವ ಅವಕಾಶ ಸಿಗಬಹುದು. ಕೋಮು ಧ್ವೇಷದ ಹಲವಾರು ಕೊಲೆಗಳು , ಪಬ್ ಮೇಲಿನ ಧಾಳಿ , ಅನೈತಿಕ ಫೋಲೀಸ್ ಗಿರಿ , ಹಲಾಲ್ ಕಟ್ , ವ್ಯಾಪಾರ ನಿಷೇಧ , ಹೀಗೆ ಹಲವಾರು ಕೋಮು ಗಲಭೆಗಳಿಂದ ದೇಶಾದ್ಯಂತ ಕುಖ್ಯಾತಿ ಪಡೆದಿರುವ ಮಂಗಳೂರಿಗೆ ಈ ಎಲ್ಲಾ ಅಕ್ರಮ , ಕಾನೂನುಭಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಎಂಟಿ ಕಮ್ಯುನಲ್ ವಿಂಗ್ ನ ಅವಶ್ಯಕತೆ ಇದೆ.
ಉಡುಪಿ ಜಿಲ್ಲೆಯಲ್ಲಿಯೂ ಸಹ ಈ ಎಂಟಿ ಕಮ್ಯುನಲ್ ವಿಂಗನ್ನು ಸ್ಥಾಪಿಸಬೇಕು ಎಂದು ದ.‌ಸಂ.ಸ. ಅಂಬೇಡ್ಕರ್ ವಾದ ಜಿಲ್ಲಾ ಪ್ರಧಾನ ಸಂಚಾಲಕರಾದ ಶ್ರೀ. ಸುಂದರ ಮಾಸ್ತರ್ ಆಗ್ರಹಿಸಿದ್ದಾರೆ.

ನೆಮ್ಮದಿಯ ನೆಲೆವೀಡಾಗಿದ್ದ ನಮ್ಮ ಉಡುಪಿಯು ಈಗ ಬೆತ್ತಲೆ ಪ್ರಕರಣ , ಹಿಬಾಬ್ ಪ್ರಕರಣ , ವ್ಯಾಪಾರ ನಿಷೇಧ ಪ್ರಕರಣದಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಕುಖ್ಯಾತಿಗೆ ಈಡಾಯಿತು.ಈ ಎಲ್ಲಾ ಕೋಮುವಾದಿ ಗೂಂಡಾಗಳನ್ನು ಮಟ್ಟಹಾಕಲು ಉಡುಪಿಯಲ್ಲಿ ಈ ಎಂಟಿ ಕಮ್ಯೂನಲ್ ವಿಂಗ್ ಸ್ದಾಪನೆಯಾಗಲೇ ಬೇಕು.
ಈ ವಿಂಗ್ ಬಗ್ಗೆ ಸಾರ್ವಜನಿಕರಾರೂ ಗಾಬರಿ ಭಯ ಗೊಂಡಂತೆ ಕಾಣುತ್ತಿಲ್ಲ. ಯಾಕಂದರೆ ಈ ವಿಂಗ್ ಕೇವಲ ಕಾನೂನು ಬಾಹಿರ ಚಟುವಟಿಕೆಗಳನ್ನಷ್ಟೇ ನಿಯಂತ್ರಿಸುತ್ತದೆ. ಆದರೆ ಕೆಲವೊಂದಷ್ಟು ಜನ ಈ ಎಂಟಿ ಕಮ್ಯುನಲ್ ವಿಂಗ್ ಬಗ್ಗೆ ಭಯಗೊಳ್ಳುವುದು ನೋಡಿದರೆ ಕುಂಬಳ ಕಾಯಿ ಕಳ್ಳ ಯಾರು ಎಂದು ಕೇಳಿದರೆ‌ಹೆಗಲು ಮುಟ್ಟಿ ನೋಡಿಕೊಂಡನಂತೆ ಎಂಬ ಗಾದೆಯ ನೆನಪಾಗುತ್ತದೆ.


ಯಾವುದೇ ತಪ್ಪು ಮಾಡದ , ಕಾನೂನನ್ನು ಕೈಗೆ ತೆಗೆದುಕೊಳ್ಳದ , ಸಂವಿಧಾನದ ಅಡಿಯಲ್ಲಿ ಬಧುಕುತ್ತಿರುವ ಯಾವ ನಾಗರೀಕರೂ ಭಯ ಪಡುವ ಅಗತ್ಯ ಇಲ್ಲ ಎಂದು ಸುಂದರ ಮಾಸ್ತರ್ ಅಭಿಪ್ರಾಯ ವ್ಯಕ್ತಪಡಿಸಿದರು.


ಉಡುಪಿಯ ಸಾರ್ವಜನಿಕರು ನೆಮ್ಮದಿಯಿಂದ ಸೌಹಾರ್ದತೆಯಿಂದ , ಸಹಬಾಳ್ವೆಯಿಂದ ಬಧುಕಲು ಈ ಎಂಟಿ ಕಮ್ಯುನಲ್ ವಿಂಗ್ ಸ್ಥಾಪಿಸಬೇಕೆಂದು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಜಿಲ್ಲಾ ಸಂಘಟನಾ ಸಂಚಾಲಕರಾದ ಶ್ರೀ. ಶ್ಯಾಮರಾಜ್ ಬಿರ್ತಿ , ಪರಮೇಶ್ವರ ಉಪ್ಪೂರು , ಭಾಸ್ಕರ್ ಮಾಸ್ಟರ್ , ಶ್ಯಾಮಸುಂದರ್ ತೆಕ್ಕಟ್ಟೆ , ಮಂಜುನಾಥ್ ಬಾಳ್ಕುದ್ರು , ಅಣ್ಣಪ್ಪ ನಕ್ರೆ , ಗೋಪಾಲಕೃಷ್ಣ ಕುಂದಾಪುರ , ಶ್ರೀಧರ ಕುಂಜಿಬೆಟ್ಟು , ತಾಲೂಕು ಸಂಚಾಲಕರಾದ ಶ್ರೀ. ಶಂಕರ್ ದಾಸ್ ಚೆಂಡ್ಕಳ , ಶ್ರೀನಿವಾಸ ವಡ್ಡರ್ಸೇ , ನಾಗರಾಜ ಕುಂದಾಪುರ , ವಿಠಲ ಉಚ್ಚಿಲ , ರಾಘವ ಕುಕುಜೆ , ದೇವು ಹೆಬ್ರಿ ಒತ್ತಾಯಿಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button