ಉಡುಪಿ | ಜಿಲ್ಲೆಯಲ್ಲಿ ಸೆ. 17 ರಿಂದ ಆಯುಷ್ಮಾನ್ ಭವ ಕಾರ್ಯಕ್ರಮ

ಉಡುಪಿ ಜಿಲ್ಲೆಯಲ್ಲಿ ದಿನಾಂಕ 17.09.2023 ರಿಂದ ಆಯುಷ್ಮಾನ್ ಭವ ಕಾರ್ಯಕ್ರಮವನ್ನು ಆರಂಭಿಸಲಾಗಿದ್ದು ಜನಸಾಮಾನ್ಯರಿಗೆ ಉಚಿತವಾಗಿ ವಿವಿಧ ಆರೋಗ್ಯ ಸೇವೆಗಳನ್ನು ತಲುಪಿಸಲು ಜಿಲ್ಲೆಯ 6 ಸಮುದಾಯ ಆರೋಗ್ಯ ಕೇಂದ್ರ , 62 ಪ್ರಾಥಮಿಕ ಆರೋಗ್ಯ ಕೇಂದ್ರ, 2 ನಗರ ಪ್ರಾಥಮಿಕ ಆರೋಗ್ಯ ಕೇಂದ್ರ , 249 ಆರೋಗ್ಯ ಮತ್ತು ಕ್ಷೇಮ ಉಪಕೇಂದ್ರಗಳಲ್ಲಿ ನಿರಂತರವಾಗಿ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಲಾಗಿದೆ.

ಮನೆ ಮನೆಗೆ ಭೇಟಿ ನೀಡಿ PMJAY ಕಾರ್ಡ್ ಗಳ ಬಗ್ಗೆ ಅರಿವು ಮೂಡಿಸಿ ಗ್ರಾಮ ಒನ್ ಸೆಂಟರ್‌ಗಳಲ್ಲಿ PMJAY ಕಾರ್ಡ್ ಗಳನ್ನು ಮಾಡಿಕೊಡಲಾಗುತ್ತಿದೆ. ಜಿಲ್ಲೆಯ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ತಜ್ಞವೈದ್ಯರುಗಳಿಂದ ಶಿಬಿರವನ್ನು ಆಯೋಜಿಸಲಾಗಿದೆ. ಸ್ವಚ್ಚತಾ ಸಪ್ತಾಹ ಅಂಗವಾಗಿ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಆರೋಗ್ಯ ಕೇಂದ್ರದ ಒಳಾಂಗಣ ಹಾಗೂ ಹೊರಾಂಗಣದಲ್ಲಿ ಸ್ವಚ್ಚತಾ ಕಾರ್ಯಗಳನ್ನು ನಡೆಸಲಾಗುತ್ತಿದೆ. ವಿವಿಧ ಕಾರ್ಯಕ್ರಮಗಳಡಿಯಲ್ಲಿ ರಕ್ತದೊತ್ತಡ , ಮಧುಮೇಹ , ಕ್ಯಾನ್ಸರ್ , ಜೀವನ ಶೈಲಿ ನಿರ್ವಹಣೆ , ಕ್ಷಯ ರೋಗ , ಕುಷ್ಠರೋಗ , ಕಣ್ಣು, ಚರ್ಮ, ಮುಂತಾದ ರೋಗಗಳ ತಪಾಸಣಾ ಶಿಬಿರಗಳು, ರಕ್ತದಾನ ಶಿಬಿರಗಳು , ಅಂಗಾಂಗ ದಾನ ನೊಂದಣಿಗಳು, ಈಗಾಗಲೇ ನಡೆಯುತ್ತಿದ್ದು ಮುಂದೆಯೂ ಸಹ ಈ ಕೆಳಗಿನ ವೇಳಾಪಟ್ಟಿಯಂತೆ ಆಯುಷ್ಮಾನ್ ಭವ ಕಾರ್ಯಕ್ರಮ ನಡೆಯಲಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಲು ಕೋರಲಾಗಿದೆ.

ಕ್ರಸಂ
ಶಿಬಿರದ ದಿನಾಂಕ
ಶಿಬಿರ ನಡೆಯುವ ಸ್ಥಳ
1
28.09.2023
ಬಿಜೂರು (ಬೈಂದೂರು),
2
01.10.2023
ಬನ್ನಂಜೆ ನಾರಾಯಣ ಗುರು ಸಭಾಭವನ (ಉಡುಪಿ) ,ಪ್ರಾ.ಆ.ಕೇಂದ್ರ ಶಂಕರನಾರಾಯಣ
ಪ್ರಾ.ಆ.ಕೇಂದ್ರ ಹಿರೆಬೆಟ್ಟು
3
03.10.2023
ಕೆಮ್ಮಣ್ಣು, ವಂಡ್ಸೆ, ಗುಜ್ಜಾಡಿ (ಮರವಂತೆ),
4
05.10.2023
ನಂದಳಿಕೆ, ಬಿದ್ಕಲ್ ಕಟ್ಟೆ
5
06.10.2023
ಹೆಮ್ಮಡಿ (ಗಂಗೊಳ್ಳಿ), ಬೆಳ್ಮಣ್ಣು
6
08.10.2023
ಕಂಡ್ಲೂರು , ಹಿರ್ಗಾನ,
7
09.10.2023
ಅಮಾಸೆಬೈಲು, ಹಾಲಾಡಿ,
8
10.10.2023
ಮರವಂತೆ , ಹಕ್ಲಾಡಿ, ಮಣಿಪುರ, ಸಾಬ್ರಕಟ್ಟೆ, ಆಜ್ರಿ (ಸಿದ್ದಾಪುರ), ಇನ್ನಾ, ಉಚಿಲ (ಪಡುಬಿದ್ರೆ)
9
11.10.2023
ಹಳ್ಳಿಹೊಳೆ
10
12.10.2023
ಗಂಗೊಳ್ಳಿ, ಮಡಮಕ್ಕಿ (ಬೆಳ್ವೆ),
11
15.10.2023
ಕೊರಂಗ್ರಪಾಡಿ ಮಣಿಪುರ
12
17.10.2023
ಕುಚ್ಚೂರು (ಹೆಬ್ರಿ), ಬಹಗೋಳಿ, ಮರವಂತೆ
13
18.10.2023
ತೆಕ್ಕಟ್ಟೆ (ಕುಂಭಾಶಿ)
14
20.10.2023
ಕೊಟೇಶ್ವರ
15
25.10.2023
ಬಿದ್ಕಲ್ ಕಟ್ಟೆ, ದುರ್ಗಾ , ವಂಡ್ಸೆ
16
26.10.2023
ಬಡಕೆರೆ (ನಾಡಾ) ,
17
31.10.2023
ಮಂದಾರ್ತಿ, ವಕ್ವಾಡಿ, ಕೊರ್ಗಿ

Latest Indian news

Popular Stories