ಉಡುಪಿ | ಜಿಲ್ಲಾಧಿಕಾರಿ ನೇತೃತ್ವದಲ್ಲಿ ಜಿಲ್ಲಾ ದಲಿತ ದೌರ್ಜನ್ಯ ತಡೆ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ರಚನೆ

ಕರ್ನಾಟಕ ಸರ್ಕಾರದ ಸತ್ತೋಲೆಯಂತೆ ಉಡುಪಿ ಜಿಲ್ಲೆಯ ಜಿಲ್ಲಾಡಳಿತ, ಸಮಾಜಕಲ್ಯಾಣ ಇಲಾಖೆಯು ಜಿಲ್ಲೆಯ ದಲಿತ ದೌರ್ಜನ್ಯ ತಡೆ ಕಾಯ್ದೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ದೌರ್ಜನ್ಯ ತಡೆ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯನ್ನು ನೂತನವಾಗಿ ಉಡುಪಿ ಜಿಲ್ಲಾಧಿಕಾರಿಗಳಾದ ಕೂರ್ಮ ರಾವ್ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿರುತ್ತದೆ.

ನೂತನವಾಗಿ ಆಯ್ಕೆಯಾದ ಈ ಸಮಿತಿಗೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕರು ಹಾಗು ಕರ್ನಾಟಕ ದಲಿತ ಸಂಘಟನೆಗಳ ಐಕ್ಯ ಹೋರಾಟ ಸಮಿತಿಯ ಉಡುಪಿ ಜಿಲ್ಲಾ ಸಂಚಾಲಕರು ಆದ ವಾಸುದೇವ ಮುದೂರು , ಹಾಗು ಉದಯ ಪಂಬದ, ಮಂಜುನಾಥ ವಿ. ವಕೀಲರು, ಗೌರಿ ಕೆಂಜೂರು, ಬಾಲಗಂಗಾಧರ ಬಿ. ಗೌಡ, ಉದಯ ಕುಮಾರ್, ಇವರು ನೂತನವಾಗಿ ಆಯ್ಕೆಯಾಗಿದ್ದು ಜಿಲ್ಲಾ ದೌರ್ಜನ್ಯ ತಡೆ ಜಾಗೃತಿ ಮತ್ತು ಉಸ್ತುವಾರಿ ಸಮಿತಿಗೆ ಮಾನ್ಯ ಜಿಲ್ಲಾಧಿಕಾರಿಗಳು ಅದ್ಯಕ್ಷರಾಗಿರಲಿದ್ದು ಜಿಲ್ಲಾ ಸಮಾಜಕಲ್ಯಾಣ ಉಪನಿರ್ದೇಶಕರು ಕಾರ್ಯದರ್ಶಿಗಳಾಗಿದ್ದಾರೆ ಹಾಗು ಈ ಸಮಿತಿಯಲ್ಲಿ ಉಡುಪಿ, ಚಿಕ್ಕಮಗಳೂರು , ಶಿವಮೊಗ್ಗ ಲೋಕಸಭಾ ಕ್ಷೇತ್ರದ ಲೋಕಸಭಾ ಸದಸ್ಯರುಗಳು ಉಡುಪಿ, ಕಾಪು, ಕಾರ್ಕಳ, ಬೈಂದೂರು, ಕುಂದಾಪುರ ಕ್ಷೇತ್ರದ ವಿಧಾನ ಸಭಾ ಸದಸ್ಯರು, ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು. ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪ್ರಧಾನ ಸರ್ಕಾರಿ ಅಭಿಯೋಜಕರು ಉಡುಪಿ ಜಿಲ್ಲೆ . ಸರ್ಕಾರಿ ಅಭಿಯೋಜಕರು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕುಂದಾಪುರ. ಜಿಲ್ಲಾ ವ್ಯವಸ್ಥಾಪಕರು ಡಾ || ಬಿ ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ಉಡುಪಿ ಜಿಲ್ಲೆ. ಯೋಜನಾ ಸಮನ್ವಯಾಧಿಕಾರಿಗಳು ಐ.ಟಿ.ಡಿ.ಪಿ. ಉಡುಪಿ ಜಿಲ್ಲೆ. ಕಾರ್ಯ ನಿರ್ವಹಕಾಧಿಕಾರಿಗಳು ತಾಲ್ಲೂಕು ಪಂಚಾಯತ್ ಉಡುಪಿ ಇವರೆಲ್ಲರೂ ಸದಸ್ಯರುಗಳಾಗಿದ್ದು ಸಮಿತಿಯು ಮೂರು ವರ್ಷಗಳ ಕಾಲ ಕಾರ್ಯಚರಿಸಲಿದ್ದು ದೌರ್ಜನ್ಯ ತಡೆ ಜಾಗ್ರತಿ ಮತ್ತು ಉಸ್ತುವಾರಿಯ ಪೂರ್ಣ ಪ್ರಮಾಣದ ಅಧಿಕಾರವನ್ನು ಹೊಂದಿದೆ.

Latest Indian news

Popular Stories