ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನ ವಿರೋಧಿಸಿ ಕಾರವಾರದಲ್ಲಿ ಧರಣಿ

ಕಾರವಾರ : ಮಾರ್ಚ ೨೧ರ ರಾತ್ರಿ ಭಾರತದ ಇತಿಹಾಸದಲ್ಲಿ ಒಂದು ಕರಾಳ ರಾತ್ರಿ ಎಂದು ಉತ್ತರ ಕನ್ನಡ ಜಿಲ್ಲಾ ಆಮ್ ಆದ್ಮಿ ಘಟಕ ಹೇಳಿದೆ.

ಕಾರವಾರದ ಮಹಾತ್ಮ ಗಾಂಧಿ ಪ್ರತಿಮೆ ಎದುರು ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಶುಕ್ರವಾರ ಧರಣಿ ನಡೆಸಿದರು.

ಗುರುವಾರ ರಾತ್ರಿ ೯ ಘಂಟೆಗೆ ದೆಹಲಿಯ
ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ಅಧ್ಯಕ್ಷರನ್ನು ಜಾರಿ ನಿರ್ದೇಶಾನಾಲಯ, ರಾಷ್ಟ್ರವನ್ನು ಆಳುವ ಪಕ್ಷ ಬಿಜೆಪಿ
ಕುಮ್ಮಕ್ಕಿನಿಂದ ಬಂಧಿಸಿದೆ ಎಂದು ಆರೋಪಿಸಿತು.
ಈ ಘಟನೆ ಎಲ್ಲಾ ಭಾರತೀಯರನ್ನು ಕಾಡುವ ಪ್ರಶ್ನೆಯೆಂದರೆ ಯಾವ ಕಾರಣಕ್ಕಾಗಿ ಕೇಜ್ರಿವಾಲ್
ಅವರನ್ನು ಬಂಧಿಸಿದರು ? ದೆಹಲಿ ರಾಜ್ಯದಲ್ಲಿ ಎಲ್ಲರಿಗೂ ಉಚಿತ ವಿಧ್ಯುತ್ ಕೊಟ್ಟಿದಕ್ಕಾಗಿ ? ಎಲ್ಲರಿಗೂ ಉಚಿತ ನೀರು
ಕೊಟ್ಟದಕ್ಕಾಗಿ ? ವಿವಿಧ ಕಡೆಗಳಲ್ಲಿ ಆಸ್ಪತ್ರೆಗಳನ್ನು ಕಟ್ಟಿಸಿದಕ್ಕಾಗೀ ? ಉತ್ತಮ ಶಾಲಾ ಕಟ್ಟಡಗಳನ್ನು ಕಟ್ಟಿ ಅತ್ಯುತ್ತಮ ವಿಧ್ಯಾಭ್ಯಾಸ ಸೌಲಭ್ಯ ಕಲ್ಪಿಸಿದಕ್ಕಾಗಿಯೇ ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಲಿಯೋ ಪ್ರಶ್ನಿಸಿದರು ‌ .
ಎಲ್ಲರಿಗೂ ಗೊತ್ತಿರುವ ಸಂಗತಿ ಎಂದರೆ ಕೇಜ್ರಿವಾಲರ ಆಡಳಿತ ವೈಖರಿಯಿಂದ ಹೆದರಿ , ಮೋದಿ ಸರಕಾರ ಜಾರಿ ನಿರ್ದೇಶಾನಾಲಯವನ್ನು ಬಳಸಿ ಮಾಡಿದ ಹೇಸಿಗೆಯ ಕೃತ್ಯ ಇದಾಗಿದೆ‌ ಎಂದರು‌ .

ಭ್ರಷ್ಟಾಚಾರವನ್ನು ವಿರೋಧಿಸಿ, ಐಆರ್‌ಎಸ್ ಸರಕಾರಿ ಕೆಲಸವನ್ನು ತ್ಯಾಗ ಮಾಡಿ‌ದ ಕೆಜ್ರಿವಾಲ್ , ಸಾಮಾನ್ಯ ಜನರೊಡಗೂಡಿ, ಆಮ್ ಆದ್ಮಿ ಎಂಬ ಪಕ್ಷ ಕಟ್ಟಿ, ದೆಹಲಿ ಗದ್ದುಗೆಯನ್ನು ಏರಿ , ಸತತ ಎರಡನೇ ಬಾರಿ ಮುಖ್ಯಮಂತ್ರಿ ಯಾಗಿರುವ ಅರವಿಂದ ಕೇಜ್ರಿವಾಲ್ ಇವರನ್ನು ಕಟ್ಟಿ ಹಾಕುವ ಪೊಳ್ಳು ವಿಧಾನ ಇದಾಗಿದೆ. ಇದರ ಹಿಂದೆ ಯಾರಿದ್ದಾರೆ ಎಂದು ತಿಳಿಯಲು ನಾವು ಯಾರೂ
ಚಂದ್ರ ಲೋಕ್ಕಕೆ ಹೋಗಿ ತಿಳಿಯಬೇಕಾಗಿಲ್ಲ ಎಂದು ಲಿಯೋ ಲೂಯಿಸ್ ಹೇಳಿದರು‌ . ಆಗಸ್ಟ್ ೧೫ ರ ಮಧ್ಯರಾತ್ರಿ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದ ನಾವು ಇದೀಗ , ಮಧ್ಯರಾತ್ರಿಯಲ್ಲಿ ಸ್ವಾತಂತ್ರ್ಯ ಕಳೆದುಕೊಳ್ಳುವ ಮಟ್ಟಕ್ಕೆ ತಲುಪಿದ್ದೇವೆ. ಒಬ್ಬ ನಿರಪರಾಧಿಯನ್ನು, ಸಚ್ಚಾರಿತ್ರ್ಯ ವಂತರನ್ನು ಅಪರಾಧಿ ಮಾಡಲು ಹೊರಟ ಮೋದಿ ಸರಕಾರದ ಕಳವಳಕಾರಿ ಪರಿ ಇದು. ಜ್ಯಾರಿ ನಿರ್ದೇಶಾನಾಲಯ ಕೇವಲ ಒಂದು ನಿಮಿತ್ತ ವಾಗಿದೆ. ಸರ್ವಾಧಿಕಾರೊದ ಪರಮಾವಧಿಯನ್ನು ದೇಶದಲ್ಲಿ ಕಾಣಬಹುದು. ಕುರುಡು ದೇಶ ಪ್ರೇಮದ ಹೆಸರಲ್ಲಿ, ಸ್ವಾರ್ಥ ರಾಜಕಾರಣ ಎಂಬುದು ಇದ್ದರೆ, ಅವುಗಳಿಗೆಲ್ಲ,
ನಿರಪರಾಧಿಗಳ ಮೇಲೆ ಇಂತಹ ರಾತ್ರಿ ಕಾಲದಲ್ಲಿ ನಡೆಯುವ ಕುಕೃತ್ಯಗಳೇ ಸಾಕ್ಷಿ. ಇದು ಮೋದಿ ಸರಕಾರದ ದಮನ ನೀತಿ ಎಂದು ಆಮ್ ಆದ್ಮಿ ಪ್ರತಿಪಾದಿಸಿದೆ.

ಕೇಜ್ರಿವಾಲ್ ಸರಕಾರವು ಅಭಿವೃಧ್ದಿ ನೀತಿ ಮತ್ತು ರೀತಿಗಳನ್ನು ಅನುಸರಿಸಿದರೆ, ಅದೇ ಮೋದಿ ಸರಕಾರ ಕೈಲಾಗದವನು , ಮೈ ಪರಚಿಕೊಂಡಂತೆ ಅಭಿವೃಧ್ದೀ ಮಾಡುವವರನ್ನೇ ನಿರ್ಣಾಮ ಮಾಡಲು ಹೊರಟಿದೆ.
ಇಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಯುತ್ತಿದೆ. ತನ್ನ ಪರಿವಾರವನ್ನು ಸೇರದವರನ್ನು ಕತ್ತಲ ಸಾಮ್ರಾಜ್ಯಕ್ಕೆ ದೂಡಲಾಗುತ್ತಿದೆ.

ಈ ದಿನ ಅರವಿಂದ ಕೇಜ್ರವಾಲರ ಬಂಧನವನ್ನು ವಿರೋಧಿಸಿ ಕೇವಲ ಆಮ್ ಆದ್ಮಿ ಪಕ್ಷ ಮಾತ್ರವಲ್ಲ ಬದಲಾಗಿ ,ಎಲ್ಲಾ ಪ್ರಜಾಪ್ರಭುತ್ವವನ್ನು ಪ್ರೀತಿಸುವ ಜನಸಾಮಾನ್ಯರು ದೇಶಾದ್ಯಾದಂತ ರ‍್ಯಾಲಿಗಳನ್ನು ನಡೆಸಿ, ಪ್ರಜಾಪ್ರಭುತ್ವವನ್ನು
ಉಳಿಸಲು ಕರೆ ಕೊಟ್ಟಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ನಡೆಯುವ ಚುನಾವಣೆಯಲ್ಲಿ ಮತ ಚಲಾಯಿಸುವ ಪ್ರಜ್ಞಾವಂತರು ಯೋಚಿಸಬೇಕಿದೆ.
ಚುನಾವಣಾ ಬಾಂಡ್ ಅಸ್ತ್ರ ಉಪಯೋಗಿಸಿ, ಎಲ್ಲಾ ವಿವಿಧ ರೀತಿಯ ಸುಸ್ತಿದಾರರನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ.

ಒಂದು ಗಂಟೆ ಧರಣಿ :
ಗಾಂಧಿ ಪ್ರತಿಮೆಯ ಎದುರಲ್ಲಿ ಒಂದು ಗಂಟೆ ಕಾಲ ಆಮ್ ಆದ್ಮಿ ಪಕ್ಷದ ಪದಾಧಿಕಾರಿಗಳು ಧರಣಿ ನಡೆಸಿದರು. ಈ ಧರಣಿಯಲ್ಲಿ ಉತ್ತರಕನ್ನಡ ಜಿಲ್ಲಾ ಆಮ್ ಆದ್ಮಿ ಪಕ್ಷದ ಪ್ರಧಾನ ಕಾರ್ಯದರ್ಶಿ ಲೀಯೊ ಫ್ರಾನ್ಸಿಸ್ ಲುವಿಸ್, ಜಿಲ್ಲಾ ಕಾರ್ಯದರ್ಶಿ ದಾಂಡೇಲಿಯ ಗುರುದೀಪ್ ಸಿಂಗ್ , ಆಮ್ ಆದ್ಮಿ ಪಕ್ಷದ ಕಾರ್ಯಕರ್ತ ಅಲ್ತಾಫ್ ಶೇಕ್,
ಯಾಕೂಬ್ ಆಲಿ, ಕೀಶೋರ್ ಸಾವಂತ್ ಮುಂತಾದವರು ಭಾಗವಹಿಸಿದ್ದರು.
….

Latest Indian news

Popular Stories