ಕೇಂದ್ರದಿಂದ ಉದ್ದೇಶಪೂರಕವಾಗಿಯೇ ಕರ್ನಾಟಕಕ್ಕೆ ಅನ್ಯಾಯ: ಸಚಿವ ಬೋಸರಾಜು

ಮಾನ್ವಿ(ಏ.24): ಕೇಂದ್ರ ಸರಕಾರ ಉದ್ದೇಶಪೂರಕವಾಗಿ ರಾಜ್ಯಕ್ಕೆ ಪದೇ ಪದೆ ಅನ್ಯಾಯ ಮಾಡುತ್ತಿದೆ ಎಂದು ಸಣ್ಣ ನೀರವಾರಿ ಹಾಗೂ ವಿಜ್ಞಾನ ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಆರೋಪಿಸಿದರು.

ಪಟ್ಟಣದ ಭಾರತ ಜೋಡೋ ಭವನದಲ್ಲಿ ಮಂಗಳವಾರ ಮಾತನಾಡಿದ ಅವರು, ರಾಜ್ಯದಲ್ಲಿ ಬರಗಾಲ ಬಂದಿದ್ದು ಪರಿಹಾರ ನೀಡುವಂತೆ ಕಳೆದ 7 ತಿಂಗಳ ಕೆಳಗೆ ಮನವಿ ಮಾಡಿಕೊಂಡರು, ಕೂಡ ಎನ್‌ಡಿಆರ್‌ಎಫ್ ಸಭೆ ನಡೆಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಪರಿಹಾರನ್ನು ನಿಗದಿ ಮಾಡದೆ ಚುನಾವಣೆ ನೀತಿಸಂಹಿತೆ ನೆಪ ಹೇಳುತ್ತ ಬಂದಿದ್ದರಿಂದ ರಾಜ್ಯದಲ್ಲಿ ಜನರಿಗೆ ಹಾಗೂ ಜಾನುವಾರುಗಳಿಗೆ ಕುಡಿವ ನೀರಿನ ವ್ಯವಸ್ಥೆ ಹಾಗೂ ಜಾನುವಾರುಗಳಿಗೆ ಮೇವಿನ ವ್ಯವಸ್ಥೆ ಕೂಡ ಮಾಡುವುದಕ್ಕೆ ಸಾಧ್ಯವಾಗಿಲ್ಲ.

ರಾಜ್ಯಕ್ಕೆ ಬರಬೇಕಾದ ₹18,171 ಕೋಟಿ ಬರಪರಿಹಾರಕ್ಕಾಗಿ ರಾಜ್ಯ ಸರಕಾರ ನಿರ್ದೇಶನ ಕೋರಿ ಸುಪ್ರೀಂ ಕೋರ್ಟ ಮೋರೆ ಹೋದನಂತರ ಕೇಂದ್ರ ಸರಕಾರದ ಪರವಾಗಿ ನ್ಯಾಯವಾದಿಗಳು ಕೇಂದ್ರ ಸರಕಾರ ಬರಪರಿಹಾರ ನೀಡುವುದಕ್ಕೆ ನ್ಯಾಯಾಲಯದಲ್ಲಿ ಸಮಯವಕಾಶ ಕೇಳಿದೆ. ಚುನಾವಣೆ ಆಯೋಗ ಕೂಡ ಬರಪರಿಹಾರ ಬಿಡುಗಡೆ ಮಾಡುವುದಕ್ಕೆ ಅನುಮತಿ ನೀಡಿದ್ದರು, ಇನ್ನು ರಾಜ್ಯಕ್ಕೆ ಬರಪರಿಹಾರ ನೀಡಿಲ್ಲ ಎಂದು ಆರೋಪಿಸಿದರು.

Latest Indian news

Popular Stories