ಕಾರವಾರ: ನಗರದ ಪ್ರಮುಖ ರಸ್ತೆಗಳಲ್ಲಿ ಒಂದಾದ ಹಬ್ಬುವಾಡ ಇಳಕಲ್ ರಸ್ತೆಯಲ್ಲಿ ನಿರ್ಮಾಣವಾಗಿರುವ ಸಿಮೆಂಟ್ ರಸ್ತೆಗೆ ಡಿವೈಡರ್ ಹಾಕಬೇಕು. ಚರಂಡಿಗೆ ಸ್ಲ್ಯಾಬ್ ಅಳವಡಿಸಬೇಕೆಂದು ಆಗ್ರಹಿಸಿ ಮಾಜಿ ಶಾಸಕಿ ರೂಪಾಲಿ ನಾಯ್ಕ ಸೋಮವಾರ ಹಠಾತ್ ಧರಣಿ ನಡೆಸಿದರು.
ನಗರಸಭೆಯ ಕೆಲ ಸದಸ್ಯರು ಹಾಗೂ ಪಕ್ಷದ ಕಾರ್ಯಕರ್ತರ ಜೊತೆಗೆ ಹಬ್ಬುವಾಡ ರಸ್ತೆ ತಡೆ ಮಾಡಿದ ಅವರು ಸ್ಥಳಕ್ಕೆ ಪಿಡಬ್ಲುಡಿ ಅಧಿಕಾರಿಗಳು ಬರುವಂತೆ ಹಠ ಹಿಡಿದರು.ಒಂದು ತಾಸು ಧರಣಿಯಿಂದ ಹಬ್ಬುವಾಡ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯುಂಟಾಯಿತು. ಪೊಲೀಸರು ಪ್ರತಿಭಟನೆಗೆ ರಕ್ಷಣೆ ನೀಡುತ್ತಾ, ವಾಹನ ಸಂಚಾರ ಸುಗಮಗೊಳಿಸಲು ಹೆಣಗಾಡಿದರು.
ಪಕ್ಷದ ಕಾರ್ಯಕರ್ತರು ಹಾಗೂ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕಿ ರೂಪಾಲಿ ನಾಯ್ಕ ಕಾರವಾರ ಇಳಕಲ್ ರಸ್ತೆ ನಗರದ ಗೀತಾಂಜಲಿ ಚಿತ್ರಮಂದಿರದಿಂದ ಹಬ್ಬುವಾಡ,ಎಪಿಎಂಸಿ ತನಕ ರಸ್ತೆ ಅಗಲೀಕರಣ ಹಾಗೂ ಸಿಮೆಂಟ್ ರಸ್ತೆ ರೂಪಿಸಲು ನಾನು ಶಾಸಕಿಯಾಗಿದ್ದ ಅವಧಿಯಲ್ಲಿ 5 ಕೋಟಿ ರೂ.ರಸ್ತೆ ಕಾಮಗಾರಿ ಮಂಜೂರಿಯಾಗಿ,ಕಾಮಗಾರಿ ಆರಂಭವಾಗಿ ಸಿಮೆಂಟ್ ರಸ್ತೆ ಪೂರ್ಣ ಗೊಂಡಿತ್ತು.
ಅದರ ಮುಂದಿನ ಕಾಮಗಾರಿಯಾದ ರಸ್ತೆ ಡಿವೈಡರ್,ಚರಂಡಿ ಸ್ಲಾಬ್ ಹಾಕುವುದು ಮತ್ತು ವಿದ್ಯುದ್ದೀಪ ಅಳವಡಿಸುವುದು ಬಾಕಿ ಇತ್ತು.ಆದರೆ ಈಗ ಹೊಸ ಸರ್ಕಾರ ಬಂದು ಒಂದು ವರ್ಷ ಮುಗಿಯುತ್ತಾ ಬಂದರೂ ಕಾಮಗಾರಿ ಪೂರ್ಣಮಾಡದೆ ನಿರ್ಲಕ್ಷಿಸಿಸುತ್ತಿರುವುದ್ದನ್ನು ಖಂಡಿಸಿ ಪ್ರತಿಭಟನೆ ಮಾಡಬೇಕಾಯಿತು.ಸಂಬಂಧಿಸಿದ ಗುತ್ತಿಗೆದಾರರು ಮತ್ತು ಇಲಾಖೆಯ ಅಧಿಕಾರಿಗಳು ಡಿವೈಡರ್ ಹಾಕುವ ಮಧ್ಯದಲ್ಲಿ ಸಿಮೆಂಟ್ ಲೆಪ ಹಾಕಿ ಮುಚ್ಚುತ್ತಿರುವುದನ್ನು ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ರೂಪಾಲಿ ಸಂತೋಷ್ ನಾಯ್ಕ್ ತಡೆದರು.
ಹಾಗೂ ಸಾರ್ವಜನಿಕರು,ನಗರಸಭೆಯ ಸದಸ್ಯರು, ಸೋಮವಾರ
ನಡೆಯುತ್ತಿದ್ದ ಕೆಲಸವನ್ನು ನಿಲ್ಲಿಸಿ ಪ್ರತಿಭಟನೆ ನಡೆಸಿದರು, ಡಿವೈಡರ್, ವಿದ್ಯುದ್ದೀಪ ಹಾಗೂ ಚರಂಡಿ ನಿರ್ಮಾಣ ಕಾರ್ಯವನ್ನು ಆದಷ್ಟು ಶೀಘ್ರದಲ್ಲಿ ಪೂರ್ಣಗೊಳಿಸಿ ಜನತೆಗೆ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸದಿದ್ದಲ್ಲಿ ಮತ್ತೊಮ್ಮೆ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಅವರು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಕಾರವಾರದ ನಗರಸಭೆಯ ಸಾಯಿ ಸಮಿತಿ ಅಧ್ಯಕ್ಷ ಹಾಗೂ ನಗರ ಸಭೆಯ ಸದಸ್ಯರು, ಬಿಜೆಪಿ ನಗರದ ಅಧ್ಯಕ್ಷರು,ಪದಾಧಿಕಾರಿಗಳು,ಪ್ರಮುಖರು,ನಾಗರಿಕರು ಭಾಗವಹಿಸಿದ್ದರು.
…