ಇನ್ಫೋಸಿಸ್ ಮುಖ್ಯ ಹಣಕಾಸು ಅಧಿಕಾರಿ ನಿಲಂಜನ್ ರಾಯ್ ರಾಜೀನಾಮೆ

ವದೆಹಲಿ, ಡಿಸೆಂಬರ್‌ 12: ಇನ್ಫೋಸಿಸ್‌ನ ಮುಖ್ಯ ಹಣಕಾಸು ಅಧಿಕಾರಿ ನಿಲಂಜನ್ ರಾಯ್ ಅವರು ರಾಜೀನಾಮೆ ನೀಡಿದ್ದಾರೆ. ಅವರು ಮಾರ್ಚ್ 31, 2024ರವರೆಗೆ ಕಾರ್ಯನಿರ್ವಹಿಸಲಿದ್ದಾರೆ ಎಂದು ಮನಿಕಂಟ್ರೋಲ್‌ ವರದಿ ಮಾಡಿದೆ.

ನಿಲಂಜನ್‌ ರಾಯ್‌ ಅವರಿಂದ ತೆರವಾದ ಸ್ಥಾನಕ್ಕೆ ಜಯೇಶ್ ಸಂಘರಾಜ್ಕ ಅವರನ್ನು ಏಪ್ರಿಲ್ 1 ರಿಂದ ಹೊಸ ಸಿಎಫ್‌ಒ ಆಗಿ ನೇಮಕ ಮಾಡುವುದಾಗಿ ಘೋಷಿಸಲಾಗಿದೆ.

2018 ರಲ್ಲಿ ಈ ಸ್ಥಾನಕ್ಕೆ ನೇಮಕಗೊಂಡ ನಿಲಂಜನ್‌ ರಾಯ್, ಇನ್ಫೋಸಿಸ್‌ನ ಹೊರಗೆ ತಮ್ಮ ವೈಯಕ್ತಿಕ ಆಕಾಂಕ್ಷೆಗಳ ಕಾರಣದಿಂದ ಈ ಸ್ಥಾನ ತೊರೆಯಲು ನಿರ್ಧರಿಸಿದ್ದಾರೆ ಎಂದು ಇನ್ಫೋಸಿಸ್ ಹೇಳಿಕೆಯಲ್ಲಿ ತಿಳಿಸಿದೆ.

ಸಂಘರಾಜ್ಕಾ ಅವರು 18 ವರ್ಷಗಳಿಂದ ಇನ್ಫೋಸಿಸ್‌ನಲ್ಲಿ ಎರಡು ಹಂತಗಳಲ್ಲಿ ಇರುತ್ತಾರೆ. ಈಗಾಗಲೇ ಅವರು ವಿವಿಧ ನಾಯಕತ್ವದ ಸ್ಥಾನಗಳನ್ನು ನಿರ್ವಹಿಸಿದ್ದಾರೆ. ಅವರು ಪ್ರಸ್ತುತ ಕಾರ್ಯನಿರ್ವಾಹಕ ಉಪಾಧ್ಯಕ್ಷ ಮತ್ತು ಉಪ ಮುಖ್ಯ ಹಣಕಾಸು ಅಧಿಕಾರಿಯಾಗಿದ್ದಾರೆ.

Latest Indian news

Popular Stories