ಆಂಗ್ಲಭಾಷೆಯ ಫ್ಲೆಕ್ಸ ಹರಿದು ಕರವೇ ಯಿಂದ ಕಾರವಾರದಲ್ಲಿ ಪ್ರತಿಭಟನೆ

ಕಾರವಾರ : ಕಾರವಾರದ ಸುಭಾಷ ವೃತ್ತದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿ ಆಂಗ್ಲ ಭಾಷೆಯ ಪೋಸ್ಟರ್ ಗಳನ್ನು ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡ ಬಣದ ಉತ್ತರ ಕನ್ನಡ ಜಿಲ್ಲಾ ಘಟಕದಿಂದ ತೆರವುಗೊಳಿಸಲಾಯಿತು.

ಕನ್ನಡ ಬಾವುಟದೊಂದಿಗೆ ಬೀದಿಗಿಳಿದ ನಾರಾಯಣ ಗೌಡ ಬಣದ ಕರವೇ ಕಾರ್ಯಕರ್ತರು ಸುಭಾಷ ವೃತ್ತದ ಬಳಿ ಪ್ರತಿಭಟನೆ ನಡೆಸಿ, ಘೋಷಣೆಗಳನ್ನು ಕೂಗಿದರು. ಬಳಿಕ ವೃತ್ತದ ಅಕ್ಕಪಕ್ಕದಲ್ಲಿ ಆಂಗ್ಲ ಭಾಷೆಯ ಬೃಹತ್ ಫ್ಲೆಕ್ಸಗಳನ್ನು
ಕಿತ್ತು ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಜತೆಗೆ ಇಲ್ಲಿನ ಕೆನರಾ ಬ್ಯಾಂಕ್ ಶಾಖೆಯಲ್ಲಿ ಕನ್ನಡ ಅಕ್ಷರಗಳಿಲ್ಲದ ಫಲಕವನ್ನು ಕೂಡ ತೆರವುಗೊಳಿಸಿದರು.

ಸಂಪೂರ್ಣ ಆಂಗ್ಲ ಭಾಷೆಯ ನಾಮ ಫಲಕವಿದ್ದ ಅಂಗಡಿಯೊಂದಕ್ಕೆ ತೆರಳಿ, ಒಂದು ವಾರದಲ್ಲಿ ಕನ್ನಡ ನಾಮಫಲಕವನ್ನು ಅಳವಡಿಸದಿದ್ದರೆ, ನಾಮಫಲಕವನ್ನು ಕಿತ್ತುಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಈ ಸಂಬಂಧ ಕರವೇ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ
ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಕರವೇ ಕಾರವಾರ ತಾಲೂಕು ಘಟಕದ ಅಧ್ಯಕ್ಷ ನರೇಂದ್ರ ತಳೇಕರ, ಅರುಣ ಹರ‍್ಕಡೆ, ಕುಮಟಾದ ತಿಮ್ಮಪ್ಪ ನಾಯ್ಕ, ಗಣಪತಿ ನಾಯ್ಕ, ಹಳಿಯಾಳದ ಬಸವರಾಜ, ದಾಂಡೇಲಿಯ ಸಾದಿಕ್ ಮುಲ್ಲಾ , ಮಂಜುನಾಥ ನಾಯ್ಕ, ವಿನಾಯಕ ನಾಯ್ಕ, ರಾಜಾ ನಾಯ್ಕ, ಪ್ರಶಾಂತ ನಾಯ್ಕ ಹಾಗೂ ಕರವೇ ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
…..

Latest Indian news

Popular Stories