ಉತ್ತರ ಕನ್ನಡ : ಅಕ್ಟೋಬರ್ 2 ರ ತನಕ ವಿಪರೀತ ಗಾಳಿ ಮಳೆ ಸಾಧ್ಯತೆ

ಕಾರವಾರ ; ಕರ್ನಾಟಕದ ಹಲವೆಡೆ ವಿಪರೀತ ಮಳೆಯಾಗುತ್ತಿದೆ. ಇನ್ನು ಕೆಲವು ದಿನ ಮುಂದುವರಿಯಲಿದೆ ಎಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ತಿಳಿಸಿದೆ.ರಾಜ್ಯದಲ್ಲಿ ಅಕ್ಟೋಬರ್ 2ರ ತನಕ ಮಳೆಯಾಗುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಹಾಗೂ ಉತ್ತರ ಕನ್ನಡ ಜಿಲ್ಲಾಡಳಿತ ಎಲ್ಲಾ ಮೀನುಗಾರಿಗೆ ಅರಬ್ಬಿ ಸಮುದ್ರ ತೀರ ಪ್ರಕ್ಷುಬ್ಧ ವಾಗಿರುವುದರಿಂದ ಹಾಗೂ ಸಮುದ್ರದ ಗಾಳಿಯ ವೇಗ 45 ರಿಂದ 55 ಕಿಲೋ ಮೀಟರ್ಎಂ ವೇಗ ಇರಲಿದೆ ಆದ್ದರಿಂದ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದೆ.ಮೀನುಗಾರರು ಸಮುದ್ರ ದಡದಲ್ಲಿ ನಿಲ್ಲಿಸಿಟ್ಟಿರುವಂತಹ ತಮ್ಮ ದೋಣಿ ಹಾಗೂ ಬಲೆಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಲು ತಿಳಿಸಲಾಗಿದೆ.

ಅರಬ್ಬಿ ಸಮುದ್ರದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿರುವುದರಿಂದ ಹವಮಾನ ಇಲಾಖೆ ಮಾಹಿತಿ ನೀಡಿ ಅಕ್ಟೋಬರ್ 2ರ ತನಕ ಆರೆಂಜ್ ಆಲರ್ಟ್ ಘೋಷಿಸಿದೆ.

Latest Indian news

Popular Stories