ತೊಂಡೆಕಾಯಿ ತೆಗೆಯಲು ಹೋಗಿ ಬಾಲಕ ಮೃತ್ಯು

ವಿಜಯಪುರ: ಮರದಲ್ಲಿ ತೊಂಡೆಕಾಯಿ ಹರಿಯುವ ವೇಳೆ ವಿದ್ಯುತ್ ಸ್ಪರ್ಶಿಸಿ ಬಾಲಕ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಖೈನೂರ ಗ್ರಾಮದಲ್ಲಿ ನಡೆದಿದೆ.


ಮರದಲ್ಲಿನ ತೊಂಡೆಕಾಯಿ ಹರಿಯಲು ಹೋಗಿ ಹತ್ತು ವರ್ಷದ ಶಾಂತಪ್ಪ ಗಡಗಿಮನಿ ಎಂಬ ಯುವಕ ಸಾವನ್ನಪ್ಪಿದ್ದಾನೆ.


ದನಕಾಯುವ ವೇಳೆ ಮರದಲ್ಲಿ ತೊಂಡೆಕಾಯಿ ಹರಿಯಲು ಬಾಲಕ ಮರ ಏರಿದ್ದಾನೆ, ಈ ವೇಳೆ ಮರದ ಪಕ್ಕದಲ್ಲಿದ್ದ ವಿದ್ಯುತ್ ಕಂಬದಲ್ಲಿನ ವಿದ್ಯುತ್ ಸ್ಪರ್ಶಿಸಿ ಮರದಿಂದ ಬಿದ್ದು ಶಾಂತಪ್ಪ ಮೃತಪಟ್ಟಿದ್ದಾನೆ.
ಸಿಂದಗಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Latest Indian news

Popular Stories