ಗ್ರಾಫಿಕ್ ಡಿಸೈನಿಂಗ್ನಲ್ಲಿ ಕ್ರೀಯಾಶೀಲತೆ, ಕೌಶಲ್ಯ ಮುಖ್ಯ: ಪ್ರೊ. ಪಿ.ಜಿ.ತಡಸದ

ವಿಜಯಪುರ:ಗ್ರಾಫಿಕ್ ಡಿಸೈನಿಂಗ್ನಲ್ಲಿ ಕ್ರೀಯಾಶೀಲತೆ ಮತ್ತು ಅದರ ಕೌಶಲ್ಯ ಬಹಳ ಮುಖ್ಯ. ಸಾವಿರಾರು ಅಕ್ಷರಗಳಲ್ಲಿ ಹೇಳಬೇಕಾದ ಸಂಗತಿಯನ್ನು ಕೇವಲ ಒಂದು ಚಿತ್ರದ ಮೂಲಕ ಹೇಳಬಹುದಾಗಿದೆ ಎಂದು ಐಕ್ಯೂಎಸ್ಸಿ ನಿರ್ದೇಶಕ ಪ್ರೊ.ಪಿ.ಜಿ.ತಡಸದ ಹೇಳಿದರು.

ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಹಾಗೂ ಅಹಲ್ಯಾಬಾಯಿ ಸ್ನಾತಕೋತ್ತರ ಮಹಿಳಾ ಅಧ್ಯಯನ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ ಇವರ ಸಹಯೋಗದಲ್ಲಿ ಆಯೋಜಿಸಿದ್ದ `ಗ್ರಾಫಿಕ್ ಡಿಸೈನಿಂಗ್’ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಯಾವುದು ಅಕ್ಷರಗಳಲ್ಲಿ ಹೇಳಲು ಅಸಾಧ್ಯವೊ ಅಂತಹದ್ದನ್ನು ನಾವು ಒಂದು ಗ್ರಾಫಿಕ್ ಮೂಲಕ ತಿಳಿಸಬಹುದು.

ಸಾವಿರಾರು ಅಕ್ಷರಗಳಲ್ಲಿ ಹೇಳುವ ಮಾಹಿತಿಯನ್ನು ಬರೀ ಒಂದು ಚಿತ್ರದ ಮೂಲಕ ತಿಳಿಸುವ ಶಕ್ತಿ ಗ್ರಾಫಿಕ್ಗೆ ಇದೆ. ಗ್ರಾಫಿಕ್ ಡಿಸೈನ್ ಬರೀ ಒಂದು ಕ್ಷೇತ್ರದಲ್ಲಿ ಮಾತ್ರವಲ್ಲ ಪ್ರತಿಯೊಂದು ಕ್ಷೇತ್ರದಲ್ಲಿಯೂ ತನ್ನದೇ ಆದ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಮುಖ್ಯಸ್ಥ ಪ್ರೊ. ಓಂಕಾರ ಕಾಕಡೆ ಮಾತನಾಡಿ, ಡಿಜಿಟಲ್ ಮಾಧ್ಯಮ ಕ್ಷಿಪ್ರಗತಿಯಲ್ಲಿ ಬೆಳವಣಿಗೆ ಹೊಂದುತ್ತಿದ್ದು ಗ್ರಾಫಿಕ್ ಡಿಸೈನ್ಗೆ ಪ್ರಸ್ತುತ ದಿನಮಾನಗಳಲ್ಲಿ ಅತೀ ಹೆಚ್ಚಿನ ಬೇಡಿಕೆ ಇದೆ.

ಹೆಚ್ಚುತ್ತಿರುವ ಬೇಡಿಕೆಗೆ ಅನುಗುಣವಾಗಿ ಗ್ರಾಫಿಕ್ ಡಿಸೈನರ್ಗಳು ಸಿಗುತ್ತಿಲ್ಲ.ಹೀಗಾಗಿ ಈ ವಲಯದಲ್ಲಿ ನೈಪುಣ್ಯತೆ ಸಾಧಿಸಬೇಕು ಎಂದರು.ವಿಭಾಗದ ಸಹಾಯಕ ಪ್ರಾಧ್ಯಾಪಕ ಸಂದೀಪ ನಾಯಕ ಮತ್ತು ಗ್ರಾಫಿಕ್ ಡಿಸೈನರ್ ಮಂಜುನಾಥ ಹುಲಕೊಪ್ಪದ, ಸಹಾಯಕ ಪ್ರಾಧ್ಯಾಪಕಿ ಡಾ.ತಹಮೀನಾನಿಗಾರ ಸುಲ್ತಾನ ಮುಂತಾದವರು ಪಾಲ್ಗೊಂಡಿದ್ದರು.

Latest Indian news

Popular Stories