ವದಂತಿಗಳ ಮಧ್ಯೆಯು ಟಿಕೇಟ್ ಗಿಟ್ಟಿಸಿಕೊಂಡ ಸಂಸದ ಜಿಗಜಿಣಗಿ

ವಿಜಯಪುರ : ಅನಾರೋಗ್ಯ ಹಿನ್ನೆಲೆಯಲ್ಲಿ ಸಂಸದ ರಮೇಶ ಜಿಗಜಿಣಗಿ ಟಿಕೇಟ್ ಕೈ ತಪ್ಪಲಿದೆ ಎಂಬ ವದಂತಿಗಳ ಮಧ್ಯೆಯು ಸಂಸದ ರಮೇಶ ಜಿಗಜಿಣಗಿ ಟಿಕೇಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು ವಿಜಯಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೇಟ್ ರಮೇಶ ಜಿಗಜಿಣಗಿ ಅವರಿಗೆ ಮತ್ತೊಮ್ಮೆ ಒಲಿದು ಬಂದಿದೆ.

ಅನಾರೋಗ್ಯ ಹಿನ್ನೆಲೆಯಲ್ಲಿ ಸಂಸದ ರಮೇಶ ಜಿಗಜಿಣಗಿ ಟಿಕೇಟ್ ಕೈ ತಪ್ಪಲಿದೆ ಎಂಬ ವದಂತಿಗಳು ಸದ್ದು ಮಾಡಿದ ಬೆನ್ನಲ್ಲೇ ನಿನ್ನೆಯಷ್ಟೇ ಸಂಸದ ಜಿಗಜಿಣಗಿ ತಮಗೆ ಟಿಕೇಟ್ ಪಕ್ಕಾ ಎಂದು ಭರವಸೆಯ ಮಾತುಗಳನ್ನಾಡುವ ಮೂಲಕ ಟಿಕೇಟ್ ತಪ್ಪುವುದಿಲ್ಲ ಎಂದು ವಿರೋಧಿಗಳಿಗೆ ಖಡಕ್ ಸಂದೇಶ ರವಾನಿಸಿದ್ದರು.

ರಾಜ್ಯದ 9 ಜನ ಹಾಲಿ ಸಂಸದರಿಗೆ ಟಿಕೇಟ್ ಕೈ ತಪ್ಪಿದ್ದರೂ ಸಹ ಹೈಕಮಾಂಡ್ ಮಟ್ಟದ ಪ್ರಬಲವಾಗಿರುವ ರಮೇಶ ಜಿಗಜಿಣಗಿ ಮತ್ತೊಮ್ಮೆ ಟಿಕೇಟ್ ಗಿಟ್ಟಿಸಿಕೊಂಡು ಸ್ಪರ್ಧೆಗೆ ಉತ್ಸಾಹದಿಂದ ಅಣಿಯಾಗಿದ್ದಾರೆ.

ಹಾಲಿ ಸಂಸದರಾಗಿರುವ ರಮೇಶ ಜಿಗಜಿಣಗಿ ವಿಜಯಪುರ ಲೋಕಸಭಾ ಕ್ಷೇತ್ರದಿಂದ ಸತತ ಮೂರು ಬಾರಿ ಗೆಲುವಿನ ನಗೆ ಬೀರಿದ್ದಾರೆ. 1957 ರಲ್ಲಿ ವಿಜಯಪುರ ಲೋಕಸಭಾ ಕ್ಷೇತ್ರ ರಚನೆಯಾದಾಗಿನಿಂದ ಇಲ್ಲಿಯವರೆಗೂ ರಮೇಶ ಜಿಗಜಿಣಗಿ ಹೊರತುಪಡಿಸಿ ಯಾರೊಬ್ಬರು ಹ್ಯಾಟ್ರಿಕ್ ಗೆಲುವು ದಾಖಲಿಸಿಲ್ಲ. ಈಗ ನಾಲ್ಕನೇಯ ಬಾರಿಗೆ ಮತ್ತೊಮ್ಮೆ ಜಿಗಜಿಣಗಿ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ.

Latest Indian news

Popular Stories