ಕೋಟಿ ಕೋಟಿ ಒಡೆಯ ಬಿಜೆಪಿ ಅಭ್ಯರ್ಥಿ ಜಿಗಜಿಣಗಿ

ವಿಜಯಪುರ : ವಿಜಯಪುರ ಮೀಸಲು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ರಮೇಶ ಜಿಗಜಿಣಗಿ ಅವರು ಕೋಟಿ ಒಡೆಯರಾಗಿದ್ದು, ಒಟ್ಟು 51,63,15,994 ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ.
ನಾಮಪತ್ರ ಸಲ್ಲಿಕೆ ವೇಳೆ ಸಲ್ಲಿಸಿರುವ ಅಫಿಡಿವೆಟ್‌ನಲ್ಲಿ ಈ ಮಾಹಿತಿಯನ್ನು ಧೃಡೀಕರಿಸಿದ್ದು, ಒಟ್ಟು 27,05,02,304 ರೂ.ಮೌಲ್ಯದ ಸ್ಥಿರಾಸ್ಥಿ ಹಾಗೂ 24,58,13,690 ರೂ.ಮೌಲ್ಯದ ಚರಾಸ್ಥಿ ಹೊಂದಿದ್ದಾರೆ.


ಸಂಸದ ರಮೇಶ ಜಿಗಜಿಣಗಿ ಅವರ ಬಳಿ ನಗದು ರೂಪದಲ್ಲಿ 90 ಸಾವಿರ ರೂ., ಬ್ಯಾಂಕ್‌ಗಳಲ್ಲಿ ಹೂಡಿಕೆ, ಹಂಪಿ ಹೆರಿಟೇಜ್ ವೈನ್ ಯಾರ್ಡ್ಗೆ 1,11,80,805 ರೂ, ಜಿಗಜಿಣಗಿ ಜಗತಾಪ ಪ್ರೈಲಿಗೆ 8,47,08,654 ರೂ. ಹಾಗೂ 10,50,16,960 ರೂ. ಹೂಡಿಕೆ, ಶೇರ್ ಮಾರುಕಟ್ಟೆ ಇತರೆ ಸಂಸ್ಥೆಗಳಲ್ಲಿ ಹೂಡಿಕೆ ಹಾಗೂ 13 ಲಕ್ಷ ರೂ.ಮೌಲ್ಯದ 1 ಕಾರ್, 6 ಲಕ್ಷ ರೂ.ಮೌಲ್ಯದ 10 ತೊಲೆ ಬಂಗಾರ, 1,16,200 ರೂ.ಬೆಲೆಯ 3ಕೆಜಿ ಬೆಳ್ಳಿ ಸೇರಿದಂತೆ 24,58,13,690 ರೂ.ಮೌಲ್ಯದ ಚರಾಸ್ಥಿ ಹೊಂದಿದ್ದಾರೆ
ಅದೇ ತೆರನಾಗಿ ಬೆಂಗಳೂರಿನಲ್ಲಿ ಕೃಷಿ ಭೂಮಿ, ತವರು ಜಿಲ್ಲೆಯಲ್ಲಿ ಕೃಷಿ ಭೂಮಿ, ಭೂತನಾಳದಲ್ಲಿ ಕೃಷಿಯೇತರ ಭೂಮಿ, ಅಭಿವೃದ್ಧಿ ನಿರ್ಮಾಣಕ್ಕೆ ವಿನಿಯೋಗ, ಬೆಂಗಳೂರಿನಲ್ಲಿ ಅಪಾರ್ಟ್ಮೆಂಟ್, ವಸತಿ ಕಟ್ಟಡ ಸೇರಿದಂತೆ 27,05,02,304 ರೂ.ಮೌಲ್ಯದ ಸ್ಥಿರಾಸ್ಥಿ ಹೊಂದಿದ್ದಾರೆ. ಹಾಗೆಯೇ 6,81,16,765 ರೂ.ಸಾಲ ಹೊಂದಿದ್ದಾರೆ. ಕುಟುಂಬ ಸದಸ್ಯರ ಹೆಸರಲ್ಲಿ ಯಾವುದೇ ಆಸ್ತಿ ಹೊಂದಿಲ್ಲ.


ಕೋಟಿ ಕೋಟಿ ಒಡೆಯರಾದರೂ ಸಂಸದ ಜಿಗಜಿಣಗಿ ವಿವಿಧ ಆರ್ಥಿಕ ಸಂಸ್ಥೆಗಳಲ್ಲಿ ಒಟ್ಟು 6,81,16,765 ಕೋಟಿ ರೂ. ಸಾಲ ಹೊಂದಿದ್ದು, ಅವರ ಹೆಸರಿನಲ್ಲಿ 13 ಲಕ್ಷ ರೂ. ಮೌಲ್ಯದ ಹುಂಡೈ ಕಾರು ಇದೆ ಎಂದು ಅವರು ಸಲ್ಲಿಸಿರುವ ಅಫಿಡಿವಿಟ್‌ನಲ್ಲಿ ಮಾಹಿತಿ ನೀಡಿದ್ದಾರೆ.

Latest Indian news

Popular Stories