ಕಾರ್ಖಾನೆ ಬಂದ್ ಮಾಡ್ಸಿ ಇಲ್ಲವಾದರೆ ಚುನಾವಣಾ ಬಹಿಷ್ಕಾರಕ್ಕೆ ಸಮ್ಮತಿಸಿ

ವಿಜಯಪುರ: ಮದಭಾವಿ ತಾಂಡಾ ನಂ 1ರ ಹತ್ತಿರದ ಟಾಯರ್ ಕಾರ್ಖಾನೆಯಿಂದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿದ್ದು ಅದನ್ನು ಬಂದ್ ಮಾಡಬೇಕು ಇಲ್ಲವಾದರೆ ಚುನಾವಣಾ ಬಹಿಷ್ಕರಕ್ಕೆ ಸಮ್ಮತಿ ನೀಡಬೇಕೆಂದು ಆಗ್ರಹಿಸಿ ಮದಭಾವಿ ಎಲ್.ಟಿ 1 ಗ್ರಾಮದ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಗ್ರಾಮ ಪಂಚಾಯಿತಿ ಸದಸ್ಯ ಪ್ರಕಾಶ ರಾಠೋಡ ಮಾತನಾಡಿ, ಮದಭಾವಿ ತಾಂಡಾ ನಂ 1ರ ಹತ್ತಿರದ ಟಾಯರ್ ಕಾರ್ಖಾನೆಯನ್ನು ಬಂದ್ ಮಾಡಬೇಕು ಇದರಿಂದ ಸಾಕಷ್ಟು ಪ್ರಮಾಣದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ, ಈ ಕಾರ್ಖಾನೆಯನ್ನು ಬಂದ್ ಮಾಡಬೇಕೆಂದು ಆಗ್ರಹಿಸಿ 2018ರಿಂದ ಮನವಿ ಕೊಟ್ಟರು ಯಾವುದೇ ಪ್ರಯೋಜನವಾಗಿಲ್ಲ, ಈ ಕಾರ್ಖಾನೆಯಿಂದ ಇಲ್ಲಿಯ ಸಾಕಷ್ಟು ಮಕ್ಕಳಿಗೆ, ಮಹಿಳೆಯರಿಗೆ, ಮಯೋವೃದ್ಧರಿಗೆ ಆರೋಗ್ಯ ಸಮಸ್ಯೆ ಉಂಟಾಗಿವೆ, ಅದರಲ್ಲಿ ಮುಖ್ಯವಾಗಿ ಗಂಟಲು ಉರಿ, ಉಸಿರಾಟದ ತೊಂದರೆ, ಹೃದಯ ಸಂಬಂಧಿ ಕಾಯಿಲೆ, ಲಕ್ವಾ ಸೇರಿದಂತೆ ಅನೇಕ ರೀತಿಯ ಸಮಸ್ಯೆ ಎದುರಿಸುವಂತಾಗಿದೆ ಹೀಗಾಗಿ ಜಿಲ್ಲಾಧಿಕಾರಿಗಳು ಕೂಡಲೇ ಸಂಬಂಧಿಸಿದ ಅಧಿಕಾರಿಗಳಿಂದ ಸ್ಥಳಕ್ಕೆ ಖುದ್ದಾಗಿ ಆಗಮಿಸಿ ಪರಶೀಲನೆ ಮಾಡಿ, ವರದಿ ಪಡೆದುಕೊಂಡು ತಕ್ಷಣದಿಂದಲೇ ಆ ಕಾರ್ಖಾನೆಯನ್ನು ಬಂದ್ ಮಾಡಬೇಕು ಇಲ್ಲ ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾಧಿಕಾರಿಗಳ ಕಛೆರಿ ಸುತ್ತಮುತ್ತಲು 144 ಕಲಂ ಜಾರಿ ಇದೇ, ಯಾರು ಇಲ್ಲಿ ಬರಬಾರದು ಎಂದು ಪೋಲಿಸರು ಪ್ರತಿಭಟನಾಕಾರರನ್ನು ತಡೆಯಲು ಮುಂದಾದಾಗ ಗ್ರಾಮಸ್ಥರ ಹಾಗೂ ಪೊಲೀಸರು ನಡುವೆ ವಾಗ್ವಾದ ನಡೆಯಿತು. ಕೊನೆಗೆ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರು ಸ್ಥಳಕ್ಕೆ ಆಗಮಿಸಿ ಈಗಾಗಲೇ ಟಾಯರ್ ಕಾರ್ಖಾನೆಗೆ ಸಂಬಂಧಿಸಿದಂತೆ ತಲಾಟಿ, ಪಿಡಿ.ಓ ಹಾಗೂ ಚುನಾವಣಾಧಿಕಾರಿಗಳಿಂದ ವರದಿ ತರೆಸಿಕೊಂಡು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಪತ್ರ ಕಳುಹಿಸಲಾಗಿದೆ, ಅದೇ ರೀತಿ ಯಾರೂ ಚುನಾವಣಾ ಭಹಿಷ್ಕಾರ ಮಾಡಬಾರದು ಇದು ಸವಿಂಧಾನ ಅಡಿಯಲ್ಲಿ ಒಳ್ಳೆಯ ನಾಯಕರನ್ನು ಆರಿಸಲು ಇರುವ ಬಹುದೊಡ್ಡ ಹಕ್ಕು ಮತದಾನ ಮಾಡುವುದಾಗಿದೆ ಎಂದರು.
ಈ ವೇಳೆ ಗ್ರಾ ಪಂ ಸದಸ್ಯರಾದ ಪಾಂಡುರಂಗ ರಾಠೋಡ ಮಾತನಾಡಿ, ತಾಂಡಾಕ್ಕೆ ತಲಾಟಿಯವರು ಆಗಮಿಸಿ ನಮ್ಮ ಸಮಸ್ಯೆಗಳನ್ನು ಕೇಳಿ ಬಿಳಿ ಹಾಳೆಯ ಮೇಲೆ ಎಲ್ಲರೂ ಸಹಿ ಮಾಡಿ ಎಂದು ಸಹಿ ಮಾಡಿಸಿಕೊಂಡು, ನಂತರ ಜಿಲ್ಲಾಧಿಕಾರಿಗಳಿಗೆ ತಪ್ಪು ಮಾಹಿತಿ ಕಳುಹಿಸಿ ಗ್ರಾಮಸ್ಥರು ಎಲ್ಲರೂ ಚುನಾವಣೆ ಮಾಡುವುದಾಗಿ ಒಪ್ಪಿದ್ದಾರೆ, ಕಾರ್ಖಾನೆಯಿಂದ ಸಮಸ್ಯೆಯಾಗದಂತೆ ನೋಡಿಕೊಳ್ಳಿ ಎಂದು ಗ್ರಾಮಸ್ಥರು ಹೇಳಿದ್ದಾರೆ ಎಂದು ಸುಳ್ಳು ಮಾಹಿತಿ ಕಳುಹಿಸಿದ್ದಾರೆ, ಅವರು ನಮ್ಮಲ್ಲಿ ಯಾರೊಬ್ಬರಿಗೂ ಈ ವಿಷಯದ ಬಗ್ಗೆ ಚರ್ಚೆ ಮಾಡಿಲ್ಲ, ತಲಾಟಿ ಹಾಗೂ ಸರ್ಕಲ್, ಪಿ.ಡಿ.ಓ ಅವರು ಕಾರ್ಖಾನೆ ಮಾಲಿಕರಿಂದ ಹಣ ಪಡೆದು ಈ ರೀತಿ ಸುಳ್ಳು ಮಾಹಿತಿ ಕಳುಹಿಸಿದ್ದಾರೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಗ್ರಾ.ಪಂ ಸದಸ್ಯರಾದ ಮೇಘ ರಾಠೋಡ, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಪ್ರಕಾಶ ರಾಠೋಡ, ಮಾಜಿ ಅಧ್ಯಕ್ಷರಾದ ಉತ್ತಮ ರಾಠೋಡ, ಕೀರು ಲಕ್ಕು ರಾಠೋಡ (ಕಾರಭಾರಿ), ಕ್ರೀಷ್ಣಾ ಚವ್ಹಾಣ, ಗಂಗಾರಾಮ ಚವ್ಹಾಣ, ರಮೆಶ ರಾಠೋಡ, ಗೋಪಾಲ ನಾಯಕ, ಬಾಸು ಲಚ್ಚು ರಾಠೋಡ, ಲಕ್ಷö್ಮಣ ನಾಯಕ, ಠಾಕರು ರಾಠೋಡ, ಲಚ್ಚು ಚವ್ಹಾಣ, ಧನಸಿಂಗ ರಾಠೋಡ, ಶಾಂತಾಭಾಯಿ ರಾಠೋಡ, ಚಾಂದಾಭಾಯಿ ಚವ್ಹಾಣ, ದೇವಿಭಾಯಿ ಜಾಧವ, ರೂಪ್ಲಾಭಾಯಿ ಚವ್ಹಾಣ, ಸಕ್ಕುಭಾಯಿ ಚವ್ಹಾಣ, ಜಮ್ಲಾಭಾಯಿ ರಾಠೋಡ ಸೇರಿದಂತೆ ನೂರಾರೂ ಗ್ರಾಮಸ್ಥರು ಇದ್ದರು.

ಇದನ್ನೂ ಓದಿ

ಕಾಂಗ್ರೆಸ್‌ ಪಕ್ಷದಲ್ಲಿ ಸಂಸ್ಕಾರವಿಲ್ಲ: ನಿವೃತ್ತ ಡಿವೈಎಸ್‌ಪಿ ಸಂಗಪ್ಪ ಹುಣಸಿಕಟ್ಟಿ

Latest Indian news

Popular Stories