Vijayapura: ಐತಿಹಾಸಿಕ ತಾಜಬಾವಡಿಗೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ

ವಿಜಯಪುರ: ನಗರದ ಐತಿಹಾಸಿಕ ಭಾವಿ ತಾಜಬಾವಡಿಗೆ ಜಿಲ್ಲಾಧಿಕಾರಿ ಟಿ. ಭೂಬಾಲನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ರಾಜ್ಯದ ಸ್ಮಾರಕ ಸಂರಕ್ಷಣೆ ಮತ್ತು ಮೂಲಭೂತ ಸೌಕರ್ಯಗಳ/ನ್ನು ಒದಗಿಸಿ ಸ್ಮಾರಕಗಳನ್ನು ಅಭಿವೃದ್ಧಿ ಪಡಿಸಿ ಕಾರ್ಫರೇಟ್ ಸಾಮಾಜಿಕ ಹೊಣೆಗಾರಿಕೆ (CSR) ಅಡಿಯಲ್ಲಿ ಸ್ಮಾರಕಗಳ ದತ್ತು ಪಡೆಯಲು ಅವಕಾಶವನ್ನು ಕಲ್ಪಿಸಿ ದತ್ತು ಯೋಜನೆಯನ್ನು ಜಾರಿಗೊಳಿಸಲಾಗಿದ್ದು ಈ ಯೋಜನೆಯಡಿ ತಾಜಬಾವಡಿ ಸ್ಮಾರಕವನ್ನು World Monument Fund India Associations Mumbai ಸಂಸ್ಥೆಯು ದತ್ತು ಪಡೆದಿದ್ದು, ಈ ಸ್ಮಾರಕದಲ್ಲಿ ಸಂರಕ್ಷಣೆ ಮತ್ತು ಪ್ರವಾಸಿ ಮೂಲಭೂತ ಸೌಕರ್ಯಗಳು, ಸೌಂದರೀಕರಣ, ಸುಧಾರಿತ ಪ್ರವಾಸಿ ಸೌಕರ್ಯಗಳನ್ನು ಒದಗಿಸಿ ದೇಶ-ವಿದೇಶದ ಪ್ರವಾಸಿಗರನ್ನು ಆಕರ್ಷಿಸಿಲು ವಿವಿಧ ಯೋಜನೆ ಹಮ್ಮಿಕೊಂಡಿದೆ. ಈ ಹಿನ್ನಲೆಯಲ್ಲಿ ಇಂದು ಜಿಲ್ಲಾಧಿಕಾರಿಗಳು ತಾಜಬಾವಡಿ ಸ್ಮಾರಕದ ಸುತ್ತ-ಮುತ್ತಲಿರುವ ಪ್ರದೇಶಗಳಿಗೆ ಭೇಟಿ ನೀಡಿ ನಿವಾಸಿಗಳ ಜೊತೆ ಸಮಾಲೋಚನೆ ಮಾಡಿದರು ಹಾಗೂ ತಾಜಬಾವಡಿ ಸ್ಮಾರಕದ ಸುತ್ತಮುತ್ತಲಿರುವ ಶಿಥಿಲಾವಸ್ಥೆಯಲ್ಲಿರುವ ಗೋಡೆಗಳನ್ನು ಸಂರಕ್ಷಿಸಲು, ಸ್ಮಾರಕ ಅಭಿವೃದ್ಧಿಗೆ ಹಾಗೂ ಮೂಲಭೂತ ಸೌಕರ್ಯ ಒದಗಿಸಲು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಜರುಗಿಸಲು ಸೂಚಿಸಿದರು.

ಈ ಸಂದರ್ಭದಲ್ಲಿ ಪ್ರೊಬೇಷನರಿ ಐಪಿಎಸ್ ಅಧಿಕಾರಿ ಶಾಲೂ, ಮಹಾನಗರ ಪಾಲಿಕೆ ಆಯುಕ್ತ ಬದ್ರೋದೀನ ಸೌದಾಗರ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ಬಜಂತ್ರಿ, ಜಿಲ್ಲಾ ವಕ್ಪ ಅಧಿಕಾರಿ ತಬಸುಮ್.ಎಮ್, ವಕ್ಫ ಬೋರ್ಡ ನಿರೀಕ್ಷಕ ಮೋಹಸಿನ ಜಮಖಂಡಿ, ಮಹಾನಗರ ಪಾಲಿಕೆ ಅಭಿಯಂತರರು ಹಿರೆಮಠ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಮಹಾನಗರ ಪಾಲಿಕೆ, ಪ್ರಕಾಶ ಪಾಟೀಲ ಸಿಟಿ ಸರ್ವೆ ಇಲಾಖೆ, ಅನಿಲಕುಮಾರ ಬಣಜಿಗೇರ ಜಿಲ್ಲಾ ಪ್ರವಾಸೋದ್ಯಮ ಸಮಾಲೋಚಕರು ಹಾಗೂ, ವಲ್ಡ್ ಮೊನುಮೆಂಟ್ ಫಂಡ್ಸ್ ಇಂಡಿಯಾ ಅಶೋಷಿಯನ್ನ್ಸ ಮುಂಬೈ ಸಂಸ್ಥೆಯ (World Monument Funds India Associations, Mumbai) ಸಂಸ್ಥೆಯ ಅನಾಬೇಲ್ ಲೋಪೆಜ್ ಯೋಜನಾ ನಿರ್ದೇಶಕರು ಹಾಗೂ ಸಂಸ್ಥೆಯ ಪಧಾದಿಕಾರಿಗಳಾದ ಬಿ.ಶರತಚಂದ್ರ ಆರ್ಕಿಟೆಕ್ಟ, ಅಖಿಲಾ ಉದಯಶಂಕರ ಆರ್ಕಿಟೆಕ್ಟ, ಸಿಂದುಜಾ, ದೇವಿ ಕಲ್ಯಾಣಿ, ಪೀಟರ್ ಅಲೆಕ್ಸಾಂಡರ್, 27ನೇ ವಾರ್ಡನ ಮಹಾನಗರ ಪಾಲಿಕೆ ಸದಸ್ಯರು ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Latest Indian news

Popular Stories