ಆಟೋ ರಿಕ್ಷಾ ಮಗುಚಿ ಎಂಟು ತಿಂಗಳ ಹಸು-ಗೂಸು ಮೃತ್ಯು

ಶ್ರೀಮಂಗಲ ಬೀರುಗ ಗ್ರಾಮದಲ್ಲಿ ಜಾರ್ಕಂಡ್ ಮೂಲದ ಅನುರಾಗ್ ರಾಜ್ (8) ತಿಂಗಳ ಮಗು ಅಪಘಾತದಲ್ಲಿ ಮೃತಪಟ್ಟ ಘಟನೆ ನಡೆದಿದೆ.

ಶ್ರೀಮಂಗಲ ದಿಂದ ಬೀರುಗ ಗ್ರಾಮಕ್ಕೆ ಆಟೋರಿಕ್ಷದಲ್ಲಿ ಜಾರ್ಖಂಡ್ ಮೂಲದ ಕೂಲಿ ಕಾರ್ಮಿಕರು ತೆರಳುವ ಸಂದರ್ಭ ಆಟೋರಿಕ್ಷಾ ಮಗಚಿಕೊಂಡು ಪರಿಣಾಮ ತಾಯಿಯ ಕೈಯಲ್ಲಿದ್ದ ಮಗು ರಿಕ್ಷದಡಿ ಸಿಲುಕಿ ಮೃತಪಟ್ಟಿದೆ. ಶ್ರೀಮಂಗಲ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮಗುವಿನ ಮೃತ ದೇಹ ಮಡಿಕೇರಿ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.

Latest Indian news

Popular Stories