ಮನೆಯ ಮುಂದೆ ಆಟವಾಡುತ್ತಿದ್ದ ಮಗುವಿನ ಅಪಹರಣ; ಮೂರೇ ದಿನದಲ್ಲಿ ಹುಡುಕಿದ ಬೀದರ್ ಪೊಲೀಸರು – ಶ್ಲಾಘನೆ

ಬೀದರ್, ಮೇ.07: ಅಪಹರಣಕ್ಕೊಳಗಾದ ಮಗುವನ್ನು ಪೊಲೀಸರು ಮೂರು ದಿನದಲ್ಲಿಯೇ ಪತ್ತೆ ಹಚ್ಚಿರುವ ಘಟನೆ ಬೀದರ್ ನಲ್ಲಿ ನಡೆದಿದೆ.

ಬೀದರ್(Bidar)​ ನಗರ ಪೊಲೀಸರು ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

ಘಟನೆ ವಿವರ:  ಮೇ 4 ರಂದು ಬೀದರ್​ನ ಓಲ್ಡ್ ಸಿಟಿಯ ನಯಾಕಮಾನ್​ನಲ್ಲಿ ಮನೆಯ‌ ಮುಂದೆ ಆಟವಾಡುತ್ತಿದ್ದ ಎರಡು ವರ್ಷದ ಅರವಿಂದ್ ಎಂಬ ಮಗು‌ವನ್ನು ಮಹಿಳೆಯೊಬ್ಬಳು ಅಪಹರಿಸಿಕೊಂಡು ‌ಹೋಗಿದ್ದಳು.

ಈ ಕುರಿತು ನಗರ ಪೊಲೀಸ್ ‌ಠಾಣೆಯಲ್ಲಿ‌ ಮೇ 4ರಂದು ಪ್ರಕರಣ ‌ದಾಖಲಾಗಿತ್ತು. ಈ ಹಿನ್ನಲೆ ತಕ್ಷಣ ‌ಪತ್ತೆ ಕಾರ್ಯಕ್ಕೆ ಇಳಿದ ಎಸ್ಪಿ ಚೆನ್ನಬಸವಣ್ಣ ಅವರು ಮಗು ಪತ್ತೆಗಾಗಿ 3 ಪೋಲೀಸ್ ತಂಡವನ್ನು ರಚನೆ ಮಾಡಿದ್ದರು. ಇದೀಗ ಪೊಲೀಸರು ಹೈದ್ರಾಬಾದ್​ನಲ್ಲಿ ಮಗುವನ್ನ ರಕ್ಷಣೆ ಮಾಡಿ ತಾಯಿಗೆ ಮಗುವನ್ನು ಹಸ್ತಾಂತರಿಸಿದ್ದಾರೆ.

Latest Indian news

Popular Stories