ಗಡಿ ಜಿಲ್ಲೆ ಬೀದರ್‌ನ ವಿವಿಧ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿಯಲ್ಲಿ ದಾಖಲಾಗಿದ್ದ 9 ಪ್ರಕರಣಗಳಿಂದ ವಶಪಡಿಸಿಕೊಳ್ಳಲಾಗಿದ್ದ ಅಪಾರ ಪ್ರಮಾಣದ ಗಾಂಜಾವನ್ನು ಇಂದು ಜಿಲ್ಲಾ ಎಸ್‌ಪಿ ಸಮ್ಮುಖದಲ್ಲಿ ನಾಶ ಪಡಿಸಲಾಯಿತು.
ತಾಲುಕಿನ ಧನ್ನೂರು ಗ್ರಾಮದಲ್ಲಿರುವ ಇನ್ವೆರೊ ಬಯೊಟೆಕ್ ಜೈವಿಕ ತ್ಯಾಜ್ಯ ವಿಲೇವಾರಿ ಘಟಕದಲ್ಲಿ 273 ಕೆಜಿ ತೂಕದ ಅಕ್ರಮ ಗಾಂಜಾವನ್ನು ಜಿಲ್ಲಾ ಡ್ರಗ್ಸ್ ಎಕ್ಸ್ಪೋಸರ್ ನಿಯಮಾನುಸಾರ ನಾಶ ಪಡಿಸಲಾಯಿತು. ಜಿಲ್ಲೆಯ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಸಂಗ್ರಹಣೆ ಹಾಗು ಕಳ್ಳಸಾಗಾಟ ಮಾಡ್ತಿದ್ದ ವೇಳೆ ದಾಳಿ ನಡೆಸಿ ಗಾಂಜಾ ವಶಪಡಿಸಿಕೊಳ್ಳಲಾಗಿತ್ತು. ಜಪ್ತಿ ಮಾಡಿಕೊಳ್ಳಲಾಗಿದ್ದ ಒಟ್ಟು 273 ಕೆಜಿ ಗಾಂಜಾವನ್ನು ಪೊಲೀಸರು ನಾಶ ಪಡಿಸಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ಠಾಣೆಗಳ ಸಿಪಿಐ, ಪಿಎಸ್ಐ ಸೇರಿದಂತೆ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.