ಹಿಂದೂ ರುದ್ರಭೂಮಿ ಅತಿಕ್ರಮಣ ಖಂಡಿಸಿ ಔರಾದ ತಹಸಿಲ್ದಾರ್ ಕಚೇರಿಯಲ್ಲಿ ಅಣುಕು ಶವ ಪ್ರದರ್ಶನ

ಪಟ್ಟಣದಲ್ಲಿರುವ ಹಿಂದೂ ರುದ್ರಭೂಮಿಯನ್ನು ಕೆಲವರು ಅತಿಕ್ರಮಣ ಮಾಡಿಕೊಂಡು ಮಳಿಗೆಯನ್ನು ನಿರ್ಮಿಸುತ್ತಿದ್ದಾರೆ.ಅತಿಕ್ರಮಣ ತೆರವು ಗೊಳಿಸಬೇಕೆಂದು ಕಳೆದ ಎರಡು ದಿನಗಳಿಂದ ವಿವಿಧ ಕನ್ನಡಪರ ಮತ್ತು ಹಿಂದೂಪರ ಸಂಘಟನೆಗಳಿಂದ ಔರಾದ ಪಟ್ಟದ ತಹಸೀಲ್ಧಾರ್ ಕಚೇರಿಯಲ್ಲಿ ಅನಿರ್ಧಿಷ್ಟವಾಧಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಂಡಿದಾರೆ ,
ಧರಣಿ ಕುಳಿತ ಪ್ರತಿಭಟನಾಕಾರರು ತಹಸೀಲ್ಧಾರ್ ಕಚೇರಿಯಲ್ಲಿ ಹಲಗಿಯೊಂದಿಗೆ ಅಣುಕು ಶವ ಪ್ರದರ್ಶನದ ಮೂಲಕ ಸರಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ
ಹಲವು ಬಾರಿ ಅಧಿಕಾರಗಳ ಗಮನಕ್ಕೂ ತಂದರೂ ಕೇರ್ ಮಾಡುತ್ತಿಲ್ಲ ಅತಿಕ್ರಮಣ ತೆರವು ಗೊಳಿಸುವವರೆ ಅನಿರ್ಧಿಷ್ಟವಾಧಿ ಧರಣಿ ಸತ್ಯಾಗ್ರಹ ಮುಂದುವರೆಯುತ್ತೆ,2 ಎಕರೆ ಭೂಮಿ ಮಂಜೂರು ಮಾಡುವವರೆ ಅಣುಕು ಶವ ಪ್ರದರ್ಶನ ನಡೆಸಲಾಗುತ್ತೆ ಎಂದು ಶಂಕು ನಿಸ್ಪತೆ ತಿಳಿಸಿದ್ದರು,
ಸ್ಥಳಕ್ಕೆ ತಹಸಿಲ್ದಾರ್ ,ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಭೇಟಿ ನೀಡಿದ್ದು ,ಅತಿಕ್ರಮಣ ತೆರವು ಮಾಡದ್ದಿದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಹಿಂದೂಪರ ಸಂಘಟನೆ ಮುಖಂಡರು ಅಧಿಕಾರಿಗಳಿಗೆ ತಿಳಿಸಿದ್ದಾರೆ.

Latest Indian news

Popular Stories