ಶಾಸಕರಾದ ರಹೀಂ ಖಾನ್ ಅವರಿಂದ ಬೀಜ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ

ಬೀದರ ಜೂನ್ 3  (ಕರ್ನಾಟಕ ವಾರ್ತೆ): ಶಾಸಕರಾದ ರಹೀಂ ಖಾನ್ ಅವರು ಬೀದರ ತಾಲೂಕಿನಲ್ಲಿ 2021-22ನೇ ಸಾಲಿನ ಮುಂಗಾರು ಹಂಗಾಮಿನ ಬೀಜ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಜೂನ್ 3ರಂದು ಬೀದರನ ನೌಬಾದ್‌ನ ರೈತ ಸಂಪರ್ಕ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕರು ರೈತರಿಗೆ ಸೋಯಾಬೀನ್ ಸೇರಿದಂತೆ ಇನ್ನೀತರ ಬೀಜಗಳ ಪೊಟ್ಟಣಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಕೋವಿಡ್ ಹಿನ್ನೆಲೆಯಲ್ಲಿ ರೈತರು ಜಾಗೃತೆ ವಹಿಸಿ ಬೀಜದ ಪೊಟ್ಟಣಗಳನ್ನು ಪಡೆದುಕೊಳ್ಳಬೇಕು. ಸಾಮಾಜಿಕ ಅಂತರ ಕಾಯ್ದುಕೊಂಡು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸಹಕರಿಸಬೇಕು. ಜೀವನ ತುಂಬಾ ಮುಖ್ಯ. ಜೀವವಿದ್ದರೆ ಮಾತ್ರ ಏನನ್ನಾದರು ಮಾಡಬಹುದು. ಇದನ್ನು ಪ್ರತಿಯೊಬ್ಬರು ಅರಿಯಬೇಕು. ಬೀಜದ ಪೊಟ್ಟಣಗಳನ್ನು ಪಡೆದುಕೊಳ್ಳುವಾಗ ಮಾಸ್ಕ ಧರಿಸಿ, ಅಂತರ ಕಾಯ್ದುಕೊಂಡು ಕೋವಿಡ್ ಹರಡದಂತೆ ಎಚ್ಚರಿಕೆ ವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ತಾರಾಮಣಿ ಜಿ.ಎಚ್.ಹಾಗೂ ಇತರರು ಇದ್ದರು.

Latest Indian news

Popular Stories