ಸಿಎಂ ಬದಲಾವಣೆ ಅಪ್ರಸ್ತುತ, ಇಂತಹ ವಿಚಾರಗಳನ್ನ ಯಾಕೇ ತರ್ತೀರಿ‌ : ಈಶ್ವರ್ ಖಂಡ್ರೆ

ಬೀದರ್ : ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುತ್ತಾರೆ ಎಂದು ನೊಣವಿನಕೆರೆ ಕಾಡಾಸಿದ್ಧೇಶ್ವರ ಮಠಾಧ್ಯಕ್ಷರಾಗಿರುವ ಡಾ. ಕರಿವೃಷಭ ದೇಶೀ ಕೇಂದ್ರದ ಶಿವ ಯೋಗೇಶ್ವರ ಸ್ವಾಮೀಜಿ ಅವರು ಭವಿಷ್ಯ ನುಡಿದಿದ್ದಾರೆ.
ರಾಜ್ಯದಲ್ಲಿ ಸಿಎಂ, ಡಿಸಿಎಂ, ದಲಿತ ಸಿಎಂ ವಿಚಾರಗಳು ತಣ್ಣಗಾಯಿತು ಎಂದು ಅಂದುಕೊಳ್ಳುತ್ತಿರುವ ಹೊತ್ತಲ್ಲೇ ಅವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿದೆ.

ಇದರ ಹಿನ್ನೆಲೆ ಇಂದು ಬೀದರ್ ನಗರದಲ್ಲಿ ಮಾಧ್ಯಮದವರ ಜೊತೆ ಮಾತಾನಾಡುವ ಸಂಧರ್ಭದಲ್ಲಿ ಪತ್ರಕರ್ತರ ಪ್ರಶ್ನೆಗೆ ರಿಯಾಕ್ಟ್ ಮಾಡಿದ ಅರಣ್ಯ ಇಲಾಖೆ ಸಚಿವರು ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ್ ಖಂಡ್ರೆಯವರು
ಸಿಎಂ ಬದಲಾವಣೆ ಅಪ್ರಸ್ತುತ, ಇಂತಹ ವಿಚಾರಗಳನ್ನ ಯಾಕೇ ತರ್ತೀರಿ‌. ಸದ್ಯ ರಾಜ್ಯದಲ್ಲಿ ಸಿಎಂ ಬದಲಾವಣೆ ಅಪ್ರಸ್ತುತ ಎನ್ನುವ ಮೂಲಕ ಸಿದ್ದು ಪರ ಬ್ಯಾಟ್ ಬೀಸಿದ್ದಾರೆ.

ಹನಮಂತ ದೇಶಮುಖ
THG Bidar

Latest Indian news

Popular Stories