ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ, ಮರಳು ಸಾಗಣೆಗೆ ಕಡಿವಾಣ ಹಾಕಿ: ರಾಮಚಂದ್ರನ್ ಆರ್

ಬೀದರ ಜುಲೈ 27 (ಕರ್ನಾಟಕ ವಾರ್ತೆ): ಬೀದರ ಜುಲೈ 27 ( ಕರ್ನಾಟಕ ವಾರ್ತೆ):ಬೀದರ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆಗೆ ಮತ್ತು ಮರಳು ಸಾಗಣೆಗೆ ಕಡಿವಾಣ ಹಾಕಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜುಲೈ 27ರಂದು ನಡೆದ ಜಿಲ್ಲಾ ಟಾಸ್ಕ್ ಪೋರ್ಸ ಸಮಿತಿ (ಗಣಿ), ಜಿಲ್ಲಾ ಕಲ್ಲುಪುಡಿ ಮಾಡುವ ಘಟಕಗಳ ಲೈಸೆನ್ಸ್ ನೀಡಿಕೆ ಮತ್ತು ನಿಯಂತ್ರಣ ಪ್ರಾಧಿಕಾರ ಮತ್ತು ಜಿಲ್ಲಾ ಮರಳು ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜನತೆಗೆ ಅನುಕೂಲವಾಗುವಂತೆ ಜಿಲ್ಲೆಯಲ್ಲಿ ಮಾಂಜ್ರಾ ನದಿಯಲ್ಲಿ ಮರಳು ನಿಕ್ಷೇಪಗಳನ್ನು ಗುರುತಿಸುವಂತೆ ಇದೆ ವೇಳೆ ಜಿಲ್ಲಾಧಿಕಾರಿಗಳು ಸಲಹೆ ನೀಡಿದರು.
ಬೀದರ ಜಿಲ್ಲಾ ವ್ಯಾಫ್ತಿಯಲ್ಲಿ ಹೊಸದಾಗಿ ಕಲ್ಲುಪುಡಿ ಮಾಡುವ ಘಟಕಗಳ ಸಥಾಪನೆಗೆ ಜಂಟಿ ಸ್ಥಳ ಪರಿಶೀಲನೆ ಕೈಗೊಂಡು ಶಿಪಾರಸ್ಸು ಮಾಡಿರುವ ಅರ್ಜಿಗಳಿಗೆ ಸುರಕ್ಷಿತ ವಲಯೆಂದು ಘೋಷಿಸಿ, ಕರ್ನಾಟಕ ರಾಜ್ಯ ಪತ್ರದಲ್ಲಿ ಅಧಿಸೂಚನೆ ಹೊರಡಿಸಲು ಹಗೂ ಫಾರಂ ಬೀ1 ನೀಡುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಈ ವೇಳೆ ಹಿರಿಯ ಭೂವಿಜ್ಞಾನಿ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸದಸ್ಯ ಕಾರ್ಯದರ್ಶಿ ರೋಹಿತ್ ಎಸ್ ಅವರು ಮಾತನಾಡಿ, ಬೀದರ ಜಿಲ್ಲಾ ವ್ಯಾಪ್ತಿಯಲ್ಲಿ ಈಗಾಗಲೇ ಫಾರಂ ಬಿ1 ವಿತರಿಸಿರುವ ಕ್ರಷರ್ ಘಟಕವನ್ನು ಅಳವಡಿಸಲಾಗಿದ್ದು, ಅಳವಡಿಸಿಕೊಂಡ ಸಿಎಫ್‌ಓ ಪಡೆದ ಘಟಕಗಳಿಗೆ ಫಾರಂ ಸಿ ನೀಡುವ ಕುರಿತು ಅನುಮೋದನೆ ಪಡೆಯುವುದರ ಬಗ್ಗೆ ತಿಳಿಸಿದರು.
ಕಟ್ಟಡಕಲ್ಲು ಗಣಿಗುತ್ತಿಗೆ ಪ್ರದೇಶಗಳ 2020-21ನೇ ಸಾಲಿನ ಆಡಿಟ್ ಕಾರ್ಯ ಕೈಗೊಳ್ಳಲು ಡಿಜಿಪಿಎಸ್ ಡ್ರೋಣ ಸರ್ವೆ ಕಾರ್ಯ ಕೈಗೊಳ್ಳುವ ಸಂಬAಧ ಈ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎಂದು ಸಭೆಗೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್., ಸಹಾಯಕ ಆಯುಕ್ತರಾ ಗರೀಮಾ ಪನ್ವಾರ, ತಹಸೀಲ್ದಾರ ಗಂಗಾದೇವಿ ಸಿ.ಎಚ್. ಹಾಗೂ ಇತರರು ಇದ್ದರು.

Latest Indian news

Popular Stories