ಬೀದರ ಜಿಲ್ಲಾದ್ಯಂತ ಪ್ರಗತಿ ಪಥದಲ್ಲಿ ಕೋವಿಡ್-19 ಲಸೀಕಾಕರಣ

ಬೀದರ ಜೂನ್ 07 (ಕ.ವಾ.): ‘ಜೀವಕ್ಕೆ ಸಂಜೀವಿನಿ’ಯಾದ ಕೋವಿಡ್ ಲಸಿಕೆ ನೀಡಿಕೆ ಕಾರ್ಯಾಚರಣೆಯು
ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರ ಮಾರ್ಗದರ್ಶನದಲ್ಲಿ ಬೀದರ ಜಿಲ್ಲೆಯಾದ್ಯಂತ ನಿರಂತರ ಮುಂದುವರಿದಿದೆ.
ಜಿಲ್ಲಾ ಹಾಗೂ ತಾಲೂಕುಮಟ್ಟದಲ್ಲಿ ಆರೋಗ್ಯ ಇಲಾಖೆ ಸೇರಿದಂತೆ ಇನ್ನೀತರ ಇಲಾಖೆಗಳ ಅಧಿಕಾರಿಗಳು ಕೋವಿಡ್ ಲಸೀಕಾರಕರಣದಲ್ಲಿ ಭಾಗಿಯಾಗಿದ್ದಾರೆ. ತಹಸೀಲ್ದಾರರು ಮತ್ತು ತಾಪಂ ಇಓಗಳು ತಾಲೂಕುಮಟ್ಟದಲ್ಲಿ ಲಸೀಕಾರಣದ ಉಸ್ತುವಾರಿ ವಹಿಸಿದ್ದಾರೆ.
ಮೇ.22ರಿಂದ ಜಿಲ್ಲಾದ್ಯಂತ ಆರಂಭಗೊAಡಿರುವ ನಾನಾ ದುರ್ಬಲ ವರ್ಗದ ಗುಂಪಿನ ಫಲಾನುಭವಿಗಳಿಗೆ ಮತ್ತು ವಿವಿಧ ಇಲಾಖೆಗಳ ಮಂಚೂಣಿ ಕಾರ್ಯಕರ್ತರಿಗೆ ಕೋವಿಡ್ ಲಸಿಕಾಕರಣ ಮುಂದುವರೆದಿದೆ. 100 ಹಾಸಿಗೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಡಾ.ಸೋಹೆಲ್ ಅವರ ನೇತೃತ್ವದಲ್ಲಿ ಬ್ರಹ್ಮವಾಡಿಯಲ್ಲಿ ವಿಕಲಚೇನರಿಗೂ ಕೋವಿಡ್ ಲಸೀಕಾಕರಣ ನಡೆಯಿತು. ಬಸವಕಲ್ಯಾಣ ತಾಲೂಕಿನಲ್ಲಿ ಜೂನ್ 6ರಂದು 756 ಜನರಿಗೆ ಲಸೀಕೆ ನೀಡಲಾಗಿದೆ ಎಂದು ಡಾ.ವಿಷ್ಣುಕಾಂತ ಅವರು ಮಾಹಿತಿ ನೀಡಿದ್ದಾರೆ.
ಉಪ ಕೇಂದ್ರಗಳಲ್ಲಿ ಕೂಡ ಕೋವಿಡ್ ಲಸೀಕಾರಣ ಮುಂದುವರೆದಿದೆ. ಕೋಡಂಬಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಇಟಗಾ ಉಪ ಕೇಂದ್ರದಲ್ಲಿ ಜೂನ್ 6ರಂದು ಅಧಿಕಾರಿ ನಾಗೇಶ ಬುಳ್ಳಾ ಅವರ ನೇತೃತ್ವದಲ್ಲಿ ಕೋವಿಡ್ ಲಸೀಕಾಕರಣ ನಡೆಯಿತು.
ಮೊದಲನೇ ಡೋಸ್ ದಾಖಲೆ: 18ರಿಂದ 44 ವಯೋಮಾನದವರಿಗೆ ಜೂನ್ 6ರಂದು ಔರಾದ್ ತಾಲೂಕಿನಲ್ಲಿ 578, ಭಾಲ್ಕಿ ತಾಲೂಕಿನಲ್ಲಿ 1838, ಬೀದರ ತಾಲೂಕಿನಲ್ಲಿ 868, ಬಸವಕಲ್ಯಾಣ ತಾಲೂಕಿನಲ್ಲಿ 758 ಸೇರಿ ದಾಖಲೆಯ ಒಟ್ಟು 4860 ಜನರಿಗೆ ಮೊದಲನೇ ಡೋಸ್ ನೀಡಲಾಗಿದೆ.
ಅಭಿಯಾನ ಮಾದರಿಯಲ್ಲಿ ಲಸೀಕಾಕರಣ: ಜಿಲ್ಲೆಯ ವಿವಿಧೆಡೆಗಳಲ್ಲಿ 18 ಮತ್ತು 45 ಮೇಲ್ಪಟ್ಟ ವಯೋಮಾನದವರಿಗು ಕೂಡ ಕೋವಿಡ್ ಲಸೀಕಾಕರಣ ನಡೆಯುತ್ತಿದೆ. ಬೀದರನ ಗುರುದ್ವಾರದ ಗುರುನಾನಕ್ ದೇವ ಆಸ್ಪತ್ರೆಯ ಹತ್ತಿರದಲ್ಲಿ ಜೂನ್ 7ರಂದು ಅಭಿಯಾನ ಮಾದರಿಯಲ್ಲಿ 18 ಮತ್ತು 45 ಮೇಲ್ಪಟ್ಟವರಿಗೆ ಡಾ.ಎಸ್.ಕೆ.ಬೊಮ್ಮ ನೇತೃತ್ವದಲ್ಲಿ ಲಸೀಕಾರಣ ಪ್ರಕ್ರಿಯೆ ನಡೆಯಿತು.  
ಹಾಲುಣಿಸುವ ತಾಯಂದಿರರಿಗೂ ಲಸಿಕೆ: ಎರಡೂವರೆ ತಿಂಗಳಿನ ಮಗು ಹೊಂದಿದ ಹಾಲುಣಿಸುವ ತಾಯಂದಿರರಿಗೂ ಕೂಡ ಕೋವಿಡ್ ಲಸೀಕಾಕರಣ ನಡೆಯುತ್ತಿದೆ. ಕಮಲನಗರ ತಾಲೂಕಿನ ತೋರಣಾದಲ್ಲಿ ಸಿಡಿಪಿಓ ಶಂಭುಲಿAಗ್ ಹಿರೇಮಠ ಅವರ ನೇತೃತ್ವದಲ್ಲಿ ಹಾಲುಣಿಸುವ ತಾಯಂದಿರರಿಗೂ ಕೋವಿಡ್ ಲಸೀಕಾಕರಣ ನಡೆಯಿತು.
ಪ್ರತಿದಿನ ಪ್ರಗತಿಪಥದತ್ತ: 18-44 ವಯೋಮಾನದ ವಿವಿಧ ದುರ್ಬಲ ವರ್ಗದ ಫಲಾನುಭವಿಗಳಿಗೆ ಮತ್ತು ಮಂಚೂಣಿ ಕಾರ್ಯಕರ್ತರಿಗೆ ಮೇ 22ರಿಂದ ಆರಂಭಗೊAಡಿರುವ ವಿಶೇಷ ಲಸೀಕಾರಣ ಮುಂದುವರಿದಿದೆ. 18 ವರ್ಷ ಮತ್ತು 45 ವರ್ಷದ ವಯೋಮಾನದ ಮೇಲ್ಟಟ್ಟವರಿಗೆ, ಹಾಲುಣಿಸುವ ತಾಯಂದಿರರಿಗೂ ಕೂಡ ಲಸೀಕಾರಣ ನಡೆಯುತ್ತಿದೆ. ಜೊತೆಗೆ ಮೊದಲನೇ ಡೋಸ್ ಪಡೆದುಕೊಂಡವರಿಗೆ ಎರಡನೇ ಡೋಸ್ ನೀಡುವ ಕಾರ್ಯವು ಕೂಡ ನಿರಂತರ ನಡೆಯುತ್ತಿದ್ದು, ಜಿಲ್ಲೆಯಲ್ಲಿ ಕೋವಿಡ್ ಲಸೀಕೆ ನೀಡಿಕೆಯ ಪ್ರಗತಿಯು ಪ್ರತಿದಿನ ಉತ್ತಮ ರೀತಿಯಲ್ಲಿ ದಾಖಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ಪ್ರತಿಕ್ರಿಯಿಸಿದ್ದಾರೆ.

Latest Indian news

Popular Stories

error: Content is protected !!