ಹಿರಿಯಡ್ಕ: ಬಾರ್ & ರೆಸ್ಟೋರೆಂಟ್’ನ ರೆಸ್ಟ್ ರೂಮ್ ನಲ್ಲಿ ಮಲಗಿದ್ದಲ್ಲೇ ವ್ಯಕ್ತಿ ಮೃತ್ಯು

ಹಿರಿಯಡ್ಕ:ನರ್ತಕಿ ಬಾರ್‌ ಎಂಡ್‌ ರೆಸ್ಟೊರೆಂಟ್‌ನ  ರೆಸ್ಟ್‌ ರೂಮಿನಲ್ಲಿ ಮಲಗಿದಲ್ಲಿಯೇ ಆ ಬಾರಿನ ಕ್ಲಿನರ್  ಮೃತಪಟ್ಟಿದ್ದಾರೆ.

ಸುಮಾರು 45 ವರ್ಷ ವಯಸ್ಸಿನ ಸುಧಾಕರ  ಎಂಬವರು   ಸುಮಾರು 7-8 ವರ್ಷದಿಂದ ಹಿರಿಯಡ್ಕ ನರ್ತಕಿ ಬಾರ್‌ ಎಂಡ್‌ ರೆಸ್ಟೋರೆಂಟ್‌ನಲ್ಲಿ ಕ್ಲಿನಿಂಗ್‌ ಕೆಲಸ ಮಾಡಿ ಕೊಂಡಿದ್ದರು. ಎಪ್ರಿಲ್ 26 ರಂದು ತಾನು ಕೆಲಸ ಮಾಡುವ ನರ್ತಕಿ ಬಾರ್‌ ಎಂಡ್‌ ರೆಸ್ಟೊರೆಂಟ್‌ನ  ರೆಸ್ಟ್‌ ರೂಮಿನಲ್ಲಿ ಮಲಗಿದಲ್ಲಿಯೇ  ಮೃತಪಟ್ಟಿರುವುದಾಗಿದೆ.

ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 11/2024 ಕಲಂ : 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

Latest Indian news

Popular Stories