ಅಮೆಝಾನ್ ಕಾಡು ವಿಶ್ವದ ಅಚ್ಚರಿಯ ಲೋಕ. ಇಲ್ಲಿ ವೈವಿಧ್ಯಮಯ ಜೀವ ಜಂತುಗಳು ವಾಸಿಸುತ್ತವೆ. ಇದೀಗ ಈ ದಟ್ಟ ಮಳೆ ಕಾಡಿನಲ್ಲಿ ವಿಶ್ವದ ಅತೀ ದೊಡ್ಡ ಹೆಬ್ಬಾವು ಪತ್ತೆಯಾಗಿದೆ.
ನ್ಯಾಷನಲ್ ಜಿಯೋಗ್ರಾಫಿಕ್ ಕಾರ್ಯಕ್ರಮದಲ್ಲಿ ಅರಣ್ಯ ಜೀವಿಗಳ ಕುರಿತು ವರದಿ ಮಾಡುವ ಪ್ರೊ.ಫ್ರೀಂಕ್ ವಾಂಕ್ 200 ಕೀ.ಗ್ರಾಂ ತೂಕದ ಬೃಹತ್ ಹೆಬ್ಬಾವನ್ನು ಪತ್ತೆ ಹಚ್ಚಿದ್ದು, ಇದರ ತಲೆಯು ಮನುಷ್ಯನ ತಲೆಯಷ್ಟೇ ದೊಡ್ಡದಾಗಿದೆ. ಈ ಹೆಬ್ಬಾವಿನ ತಳಿ ವಿಶ್ವದ ಅತೀ ದೊಡ್ಡ ಮತ್ತು ಭಾರವಾಗಿರುವ ಹಾವುಗಳೆಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ವೀಡಿಯೋ:
The world's largest snake has been discovered in the Amazon Rainforest: The Northern Green Anaconda measures 26 feet long and weighs 440 lbs – and its head is the same size as a human's. pic.twitter.com/XlaDk0qVYt
— Denn Dunham (@DennD68) February 21, 2024