ಗೋಣ ಕೊಪ್ಪ : ಸರ್ವಧಮೀಯರಿಂದ ಸೋಂಕಿತನ ಶವ ಸಂಸ್ಕಾರ

ಮಡಿಕೇರಿ ಜೂ.೬ : ಗೋಣ ಕೊಪ್ಪದಲ್ಲಿ ಸರ್ವಧರ್ಮಗಳ ಸಮನ್ವಯತೆಯಲ್ಲಿ ಕೋವಿಡ್ ಸೋಂಕಿತನೊಬ್ಬನ ಶವ ಸಂಸ್ಕಾರ ನಡೆದಿದೆ.
ಸ್ಥಳೀಯ ನಿವಾಸಿ ಅಂಥೋಣ ಡಿಸೋಜ ಎಂಬುವವರು ಕೋವಿಡ್ ನಿಂದ ಬಲಿಯಾಗಿದ್ದು, ಮೃತದೇಹದ ಅಂತ್ಯಕ್ರಿಯೆ ಗೋಣ ಕೊಪ್ಪದ ಸಂತ ಥಾಮಸ್ ಚರ್ಚ್ ಆವರಣದಲ್ಲಿ ನಡೆಯಿತು. ಸಂತ ಥಾಮಸ್ ಚರ್ಚ್ ಗುರುಗಳಾದ ಫಾದರ್ ಅಲೆಕ್ಸ್ ಹಾಜರಿದ್ದರು.
ಹಿಂದೂ ಧರ್ಮದ ಶರತ್ ಕಾಂತ್, ಇಸ್ಲಾಂ ಧರ್ಮದ ಹಮೀದ್ ಹಾಗೂ ಕ್ರೆöÊಸ್ತ ಧರ್ಮದ ಡಾಡು ಜೋಸೆಫ್ ಅವರುಗಳು ಅಂತ್ಯ ಸಂಸ್ಕಾರ ನಡೆಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಈ ಮೂವರು ಜಾತಿ, ಧರ್ಮ, ಬೇಧ ಮರೆತು ಕೋವಿಡ್ ಸೋಂಕಿತರ ಪರವಾಗಿ ನಿರಂತರ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಫೋಟೋ :: ಗೋಣ ಕೊಪ್ಪ

Latest Indian news

Popular Stories

error: Content is protected !!