ದುಬಾರೆಯಲ್ಲಿ ಎಲಿಪ್ಯಾಂಟ್ ಶಿಬಿರ ವೀಕ್ಷಣೆ ಹಾಗೂ ಬೋಟಿಂಗ್ ಬಂದ್

ಕೊಡಗಿನಲ್ಲಿ ಸುರಿಯುತ್ತಿರುವ ಮಳೆಯಿಂದ ಕಾವೇರಿ‌ ನದಿಯಲ್ಲಿ‌‌ ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಏರಿಕೆ ಉಂಟಾಗಿದೆ

ಈ‌ ಹಿನ್ನಲೆಯಲ್ಲಿ ಕುಶಾಲನಗರ ತಾಲೂಕಿನ ನಂಜರಾಯಪಟ್ಟಣ ಬಳಿ ಇರುವ ದುಬಾರೆ ಸಾಕಾನೆ ಶಿಬಿರಕ್ಕೆ ಪ್ರವಾಸಿಗರ ಪ್ರವೇಶಕ್ಕೆ ಅರಣ್ಯ ಇಲಾಖೆ ನಿಷೇಧ ಹೇರಿದೆ.

ದುಬಾರೆಗೆ ಭೇಟಿ ನೀಡುವ ಪ್ರವಾಸಿಗರು ಸಾಕಾನೆ ಶಿಬಿರಕ್ಕೆ ತೆರಳಬೇಕಾದರೆ ಕಾವೇರಿ ನದಿ ದಾಟಿ ತೆರಳಬೇಕಿದೆ. ನದಿಗೆ ಅಡ್ಡಲಾಗಿ ಸೇತುವೆ ಇಲ್ಲದ ಕಾರಣ ಮೋಟಾರ್ ಬೋಟ್ ಗಳನ್ನು ಅವಲಂಬಿಸಬೇಕಿದೆ.

ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ದುಬಾರೆ ಸಾಕಾನೆ ಶಿಬಿರಕ್ಕೆ ಗುರುವಾರದಿಂದ ಪ್ರವೇಶ ನಿಷೇಧಿಸಲಾಗಿದೆ. ನೀರಿನ ಹರಿವು ತಗ್ಗುವವರೆಗೆ ಬೋಟಿಂಗ್ ನಿಷೇದ ಮುಂದುವರೆಯಲಿದೆ.

ಅರಣ್ಯ ಇಲಾಖೆಯ 4 ಮೋಟಾರು ಬೋಟ್ ಗಳ ಮೂಲಕ ಪ್ರವಾಸಿಗರನ್ನು ನದಿ ದಾಟಿಸಿ ಸಾಕಾನೆ ಶಿಬಿರಕ್ಕೆ ಕರೆದೊಯ್ದು ವಾಪಾಸು ಕರೆತರಲಾಗುತ್ತದೆ. ಇದೀಗ ಈ ಸೇವೆಯನ್ನು ನಿಲುಗಡೆಗೊಳಿಸಲಾಗಿದೆ.

Latest Indian news

Popular Stories