ಮಾ.23 ರಂದು ಮಡಿಕೇರಿಯಲ್ಲಿ ‘ಮಹಾ ರಕ್ತದಾನ ಶಿಬಿರ’

ಮಡಿಕೇರಿ ಮಾ.20 : ನ್ಯಾಷನಲ್ ಇಂಟಿಗ್ರೇಟೆಡ್ ಫೋರಂ ಆಫ್ ಆರ್ಟಿಸ್ಟ್ಸ್ ಅಂಡ್ ಆಕ್ಟಿವಿಸ್ಟ್(ನೀಫಾ), ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್(ನೀಮ) ಹಾಗೂ ರೆಡ್ ಕ್ರಾಸ್ ಸಂಸ್ಥೆಗಳ ಸಂಯುಕ್ರಾಶ್ರಯದಲ್ಲಿ ಮಾ.23 ರಂದು ‘ಮಹಾ ರಕ್ತದಾನ ಶಿಬಿರ’ ನಗರದಲ್ಲಿ ನಡೆಯಲಿದೆ.


ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನೀಮ ಸಂಘÀಟನೆಯ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಎ.ಆರ್.ರಾಜಾರಾಮ್ ಅವರು ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್, ರಾಜ್‍ಗುರು, ಸುಖ್‍ದೇವ್ ಮತ್ತು ಅಶ್ಫಕ್ ಉಲ್ಲಾ ಖಾನ್ ಅವರ ಬಲಿದಾನದ ದಿನದ ಅಂಗವಾಗಿ ಮಾ.

23 ರಂದು ರಕ್ತದಾನ ಶಿಬಿರವನ್ನು ಆಯೋಜಿಸುವ ಮೂಲಕ ಹುತಾತ್ಮರನ್ನು ಸ್ಮರಿಸುವ ಕಾರ್ಯ ನಡೆಯಲಿದೆ ಎಂದರು.


ರಾಷ್ಟ್ರವ್ಯಾಪಿ 1500 ಕೇಂದ್ರಗಳಲ್ಲಿ ನಡೆಯಲಿರುವ ಮಹಾ ರಕ್ತದಾನ ಶಿಬಿರ ಗಿನ್ನಿಸ್ ದಾಖಲೆಗೆ ಸೇರ್ಪಡೆಗೊಳ್ಳಲಿದೆಯೆಂದು ವಿಶ್ವಾಸದಿಂದ ನುಡಿದು, ರಾಷ್ಟ್ರಮಟ್ಟದ ಈ ಕಾರ್ಯಕ್ರಮವನ್ನು ಭಾರತೀಯ ರೆಡ್ ಕ್ರಾಸ್‍ನ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ರಾಷ್ಟ್ರಪತಿಗಳು ಮಾ.

23 ರಂದು ಬೆಳಗ್ಗೆ 10 ಗಂಟೆಗೆ ದೆಹಲಿಯಲ್ಲಿ ಉದ್ಘಾಟಿಸಲಿದ್ದಾರೆಂದು ಮಾಹಿತಿಯನ್ನಿತ್ತರು.


ದೇಶದಾದ್ಯಂತ ನಡೆಯುವ ರಕ್ತದಾನ ಶಿಬಿರದ ಭಾಗವಾಗಿ ಮಡಿಕೇರಿಯ ಬಾಲಭವನದಲ್ಲಿ ಸೂಚಿತ ದಿನದಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ರಕ್ತದಾನ ಶಿಬಿರ ನಡೆಯಲಿದೆ.

ಕೊರೊನಾ ಸಾಂಕ್ರಾಮಿಕದ ಹಂತಗಳಲ್ಲಿ ಅನಾರೋಗ್ಯಕ್ಕೆ ಒಳಗಾದವರಿಗೆ ಅತ್ಯಂತ ಅವಶ್ಯಕವಾಗಿದ್ದ ‘ಪ್ಲಾಸ್ಮ’ದ ಕೊರತೆ ಅತ್ಯಂತ ಗಂಭೀರವಾಗಿ ತಲೆದೋರಿದ್ದನ್ನು ಉಲ್ಲೇಖಿಸಿದ ಅವರು, ಅನಾರೋಗ್ಯ ಪೀಡಿತರಿಗೆ ಅವಶ್ಯಕವಾದ ರಕ್ತವನ್ನು ದಾನವಾಗಿ ನೀಡಲು ಸಾರ್ವಜನಿಕರು ಮುಂದೆ ಬರುವಂತೆ ಮನವಿ ಮಾಡಿ, ಪ್ರತಿ ರಕ್ತದಾನಿಗೂ ಪ್ರಶÀಂಸಾ ಪತ್ರವನ್ನು ನೀಡಲಾಗುತ್ತದೆಂದರು.


ನೀಮಾದ ವಕ್ತಾರರಾದ ನಡಿಬೈಲು ಉದಯ ಶಂಕರ ಅವರು ಮಾತನಾಡಿ, ನಿಫಾ ಸಂಸ್ಥೆ ಕಳೆÉದ ಆರು ವರ್ಷಗಳಿಂದ ರಾಷ್ಟ್ರ ವ್ಯಾಪಿ ರಕ್ತದಾನ ಶಿಬಿರವನ್ನು ಒಳಗೊಂಡಂತೆ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ಅದರ ಭಾಗವಾಗಿ ಮಹಾ ರಕ್ತದಾನವನ್ನು ಆಯೋಜಿಸಲಾಗಿದೆಯೆಂದು ತಿಳಿಸಿದರು.


ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಅಧ್ಯಕ್ಷರಾದ ಬಿ.ಕೆ. ರವೀಂದ್ರ ರೈ ಮಾತನಾಡಿ, ರಾಜ್ಯದ 30 ಜಿಲ್ಲೆಗಳಲ್ಲಿ ಮಹಾ ರಕ್ತದಾನ ಶಿಬಿರ ರೆಡ್ ಕ್ರಾಸ್ ಸಂಸ್ಥೆ ಹಾಗೂ ನೀಮಾ ಸಂಘಟನೆಯ ಸಹಯೋಗದಲ್ಲಿ ನಡೆಯಲಿದೆ.

ಮಡಿಕೇರಿಯ ಶಿಬಿರದಲ್ಲಿ 250 ಯೂನಿಟ್ ರಕ್ತ ಸಂಗ್ರಹದ ಗುರಿಯನ್ನು ಹೊಂದಲಾಗಿದ್ದು, ಇದಕ್ಕೂ ಹೆಚ್ಚಿನ ರಕ್ತ ಸಂಗ್ರಹವಾದಲ್ಲಿ ಅದನ್ನು ನೆರೆಯ ಜಿಲ್ಲೆಗಳಿಗಳ ರಕ್ತನಿಧಿ ಕೇಂದ್ರಗಳಿಗೆ ನೀಡುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆಯೆಂದು ತಿಳಿಸಿ, ರೆಡ್ ಕ್ರಾಸ್ ಸಂಸ್ಥೆ ಕೊಡಗಿನಲ್ಲಿ ನಿರಂತರವಾಗಿ ಸಾಮಾಜಿಕ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದೆ.

ಜಿಲ್ಲೆಯಲ್ಲಿ ಘಟಿಸಿದ ಭೂ ಕುಸಿತ, ಕೊರೊನಾ ಸಂಕ್ರಮಣದ ಸಂದರ್ಭಗಳಲ್ಲಿ ಜನರ ಸಂಕಷ್ಟಗಳಿಗೆ ಸ್ಪಂದಿಸಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದೆಯೆಂದು ಹೇಳಿದರು.


ಸುದ್ದಿಗೋಷ್ಠಿಯಲ್ಲಿ ಯುವ ಮೋರ್ಚಾ ಅಧ್ಯಕ್ಷ ನವೀನ್ ಪೂಜಾರಿ ಉಪಸ್ಥಿತರಿದ್ದರು. ಫೋಟೋ :: ಬ್ಲಡ್ ಕ್ಯಾಂಪ್

Latest Indian news

Popular Stories