ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಸಭೆ,ಚುನಾವಣೆ ಗೆಲ್ಲಲು ರಣತಂತ್ರ

ಲೋಕಸಭಾ ಚುನಾವಣೆ ಸಂಭಂದಿಸಿದಂತೆ ಕಾಂಗ್ರೆಸ್ ಗೆಲುವಿಗೆ ರಣತಂತ್ರರೂಪಿಸುವ ನಿಟ್ಟಿನಲ್ಲಿ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆ ಕೊಡಗು ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್.ಎ.ಹಂಸ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಪ್ರತಿವಲಯ ಮತ್ತು ಬೂತ್ ಅಧ್ಯಕ್ಷರ ಹೊಣೆಗಾರಿಕೆ ಮತ್ತು ಕಾರ್ಯಸೂಚಿಗಳ ಬಗ್ಗೆ ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ ಮಂತರ್ ಗೌಡ ರವರು ನಿರ್ದೇಶನ ನೀಡಿದರು.ಮಡಿಕೇರಿ ವಿಧಾನ ಸಭಾ ಕ್ಷೇತ್ರಕ್ಕೆ ಇಲ್ಲಿಯ ವರೆಗೆ ತಾವು ಚಾಲನೆ ನೀಡಿರುವ ಮತ್ತು ವಿಷೇಶವಾಗಿ ಬಿಡುಗಡೆ ಮಾಡಿಸಿದ ಅನುದಾನಗಳ ಒಟ್ಟು ಮೊತ್ತ 350 ಕೋಟಿ ರೂಗಳನ್ನು ಮೀರಿದ್ದು ಅವುಗಳ ವಿವರಗಳನ್ನು ಜನತೆಯ ಮುಂದಿಡಲು ಸೂಚನೆ ನೀಡಿದರು.ಪ್ರತಿಯೊಬ್ಬ ಮತದಾರರನ್ನು ವೈಯುಕ್ತಿಕವಾಗಿ ಭೇಟಿ ಮಾಡಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ ಮಾತನಾಡಿ ಈ ಬಾರಿ ಕೊಡಗಿನ ಇಬ್ಬರು ಶಾಸಕರುಗಳಾದ ಡಾ ಮಂತರ್ ಗೌಡ ಹಾಗೂ ಎ.ಎಸ್.ಪೊನ್ನಣ್ಣ ನವರು ಮಾಡಿರುವ ಅಭಿವೃದ್ಧಿ ಕಾರ್ಯಗಳೇ ಕಾಂಗ್ರೆಸ್ ಪಕ್ಷಕ್ಕೆ ಮತಗಳಕೆಯ ಆಧಾರ ಸ್ತಂಭ ವಾಗಿದ್ದು ಪರಿಶ್ರಮ ಪಡುವಂತೆ ಕಾರ್ಯಕರ್ತರಿಗೆ ಸೂಚಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್.ಎ.ಹಂಸರವರು ಕಳೆದ ಬಾರಿಯ ವಿಧಾನ ಸಭಾ ಕ್ಷೇತ್ರದ ಚುನಾವಣೆಯಲ್ಲಿ ಮಡಿಕೇರಿ ಬ್ಲಾಕ್ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮುನ್ನಡೆ ದೊರಕಿದ್ದು ಆ ಮುನ್ನಡೆಯನ್ನು ದುಪ್ಪಟ್ಟು ಹೆಚ್ಚು ಮಾಡಲು ಪ್ರಾಮಾಣಿಕ ಪ್ರಯತ್ನವನ್ನು ಎಲ್ಲಾ ಕಾರ್ಯಕರ್ತರ ಸಹಕಾರದಿಂದ ಮಾಡಲಾಗುವುದು ಎಂದು ಭರವಸೆ ನೀಡಿದರು.

ಈ ಸಂಧರ್ಭದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡ ಧರ್ಮಜ ಉತ್ತಪ್ಪ ಹಾಗೂ ಮಡಿಕೇರಿ ತಾಲ್ಲೂಕು ಅಧ್ಯಕ್ಷರಾಗಿ ನೇಮಕ ಗೊಂಡ ಮಂದ್ರಿರ ಮೋಹನ್ ದಾಸ್ ರವರನ್ನು ಬ್ಲಾಕ್ ಕಾಂಗ್ರೆಸ್ ವತಿಯಿಂದ ಸನ್ಮಾನಿಸಲಾಯಿತು.

ಡಿಸಿಸಿ ಉಪಾಧ್ಯಕ್ಷರಾದ ಕೊಕ್ಕಲೆರ ಸುಜು ತಿಮ್ಮಯ್ಯ,ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಸುರಯ್ಯ ಅಬ್ರಾರ್ ,ಕೆಪಿಸಿಸಿ ಮುಖಂಡರಾದ ಟಿ.ಪಿ.ರಮೇಶ್, ಮಡಿಕೇರಿ ನಗರ ಕಾಂಗ್ರೆಸ್ ಅಧ್ಯಕ್ಷರಾದ ರಾಜೇಶ್ ಯಲ್ಲಪ್ಪ,ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ತೆನ್ನಿರ ಮೈನಾ, ಡಿಸಿಸಿ ಪ್ರಧಾನ ಕಾರ್ಯದರ್ಶಿ ಮುನೀರ್ ಅಹಮದ್, ಮಾಜಿ ಮೂಡಾ ಅಧ್ಯಕ್ಷರಾದ ಚುಮ್ಮಿದೇವಯ್ಯ, ಡಿಸಿಸಿ ಸದಸ್ಯರಾದ ಅಬ್ದುಲ್ ರಜಾಕ್, ಅಯಿಲಪಂಡ ಪುಷ್ಪ ಪೂಣಚ್ಚ,ವಲಯ ಕಾಂಗ್ರೆಸ್ ಅಧ್ಯಕ್ಷರಾದ ವಿವೇಕಾನಂದ, ಕೊಟ್ಟಕೇರಿಯನ ಪ್ರದೀಪ್,ರಮೇಶ್,
ಸದಾ,ಇಬ್ರಾಹಿಮ್, ಧನಂಜಯ, ಪ್ರಮುಖರಾದ ಕೋಚನ ಹರಿ ಪ್ರಸಾದ್ ಭಾರ್ಗವ,ಜುಲೇಕಾಬಿ ,ಫ್ಯಾನ್ಸಿ ಪಾರ್ವತಿ,ಮೈಸಿ ಕೊಟ್ಟಮುಡಿ,ಇಸ್ಮಾಯಿಲ್,ಸದಾ ಮುದ್ದಪ್ಪ ,ಮುದ್ದುರಾಜ್ ,ಜಿ ಸಿ ಜಗದೀಶ್,ಶಾಫಿ ಕೊಟ್ಟಮುಡಿ,ಕಲೀಲ್ ಬಾಷ,ಕೋಳುಮುಡಿಯನ ಅನಂತ್ ,ಯಾಕುಬ್ ಸೇರಿದಂತೆ ಎಲ್ಲಾ ವಲಯಗಳ ಪ್ರಮುಖರು ಉಪಸ್ಥಿತರಿದ್ದರು.

ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ವಿ.ಜಿ.ಮೋಹನ್ ಸ್ವಾಗತಿಸಿ ಪ್ರಧಾನ ಕಾರ್ಯದರ್ಶಿ ರವೂಫ್ ಶೇಖ್ ವಂದಿಸಿದರು.

Latest Indian news

Popular Stories