ಮೇಲ್ತೆನೆ” ಯಿಂದಮೇಲ್ತೆನೆ” ಯಿಂದ ಬ್ಯಾರಿ ಭಾಷಾ ದಿನಾಚರಣೆ ದೇರಳಕಟ್ಟೆ ಬ್ಯಾರಿ ಭಾಷಾ ದಿನಾಚರಣೆ ದೇರಳಕಟ್ಟೆ

ದೇರಳಕಟ್ಟೆ :ಅ.3: ಬ್ಯಾರಿ ಲೇಖಕರು ಮತ್ತು ಕಲಾವಿದರನ್ನು ಒಳಗೊಂಡ “ಮೇಲ್ತೆನೆ” ಯ ವತಿಯಿಂದ ಬ್ಯಾರಿ ಭಾಷಾ ದಿನಾಚರಣೆಯು ಇಂದು ನಾಟೆಕಲ್‌ನ ಇ-ಲೈಟ್ ಟ್ಯೂಶನ್ ಸೆಂಟರ್‌ನಲ್ಲಿ ನಡೆಯಿತು‌.

ಮೇಲ್ತೆನೆಯ ಮಾಜಿ ಅಧ್ಯಕ್ಷ ಹಾಗೂ ಮದನಿ ಪಿಯು ಕಾಲೇಜಿನ ನಿವೃತ್ತ ಪ್ರಾಂಶುಪಾಲ ಇಸ್ಮಾಯೀಲ್ ಮಾಸ್ಟರ್ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಭಾಷೆ ಸಂವಹನಾ ಮಾಧ್ಯಮವಾಗಿದೆ. ಜನಪದ ಸಂಸ್ಕೃತಿಯು ಭಾಷೆಗಳ ಉಗಮಕ್ಕೆ ಕಾರಣವಾಗಿರುವ ಸಾಧ್ಯತೆ ಇದೆ.

ಅದನ್ನು ಬಳಕೆ ಮಾಡಿದಷ್ಟು ಭಾಷೆಗಳು ಅಭಿವೃದ್ಧಿಯಾಗಲಿದೆ. ಬ್ಯಾರಿ ಭಾಷೆಯು ಅದೇ ದಿಕ್ಕಿನಲ್ಲಿ ಸಾಗುತ್ತಿರುವುದು ಶ್ಲಾಘನೀಯ ಎಂದರು. ಮೇಲ್ತೆನೆಯ ಅಧ್ಯಕ್ಷ ಬಶೀರ್ ಕಲ್ಕಟ್ಟ ಅಧ್ಯಕ್ಷತೆ ವಹಿಸಿದ್ದರು. ಮೇಲ್ತೆನೆಯ ನೂತನ ಸದಸ್ಯ ಇಬ್ರಾಹೀಂ ನಡುಪದವು ಮಾತನಾಡಿದರು.

ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರಾದ ಬಶೀರ್ ಅಹ್ಮದ್ ಕಿನ್ಯ, ಮುಹಮ್ಮದ್ ಭಾಷಾ ನಾಟೆಕಲ್, ಹಂಝ ಮಲಾರ್, ಸಿದ್ದೀಕ್ ದೇರಳಕಟ್ಟೆ ಉಪಸ್ಥಿತರಿದ್ದರು. ಮೇಲ್ತೆನೆಯ ಗೌರವಾಧ್ಯಕ್ಷ ಆಲಿಕುಂಞಿ ಪಾರೆ ಸ್ವಾಗತಿಸಿದರು. ಮಾಜಿ ಅಧ್ಯಕ್ಷ ಮನ್ಸೂರ್ ಅಹ್ಮದ್ ಸಾಮಣಿಗೆ ಕಾರ್ಯಕ್ರಮ ನಿರೂಪಿಸಿದರು. ಸದಸ್ಯ ಅಶ್ರಫ್ ದೇರಳಕಟ್ಟೆ ವಂದಿಸಿದರು.

Latest Indian news

Popular Stories