ಮೈಸೂರು : ಸಾಲಗಾರನ ಕಿರುಕುಳದಿಂದ ಬೇಸತ್ತು ‘ಬೈಕ್’ ಸಮೇತ ಬೆಂಕಿ ಹಚ್ಚಿಕೊಂಡು ‘ಆತ್ಮಹತ್ಯೆ’

ಸೂರು : ಸಾಲಗಾರನ ಕಿರುಕುಳ ತಾಳಲಾಗದೆ ವ್ಯಕ್ತಿ ಒಬ್ಬ ಸಾಲ ಬಾದೆಯಿಂದ ಅದೇ ಸತ್ತು ಬೈಕ್ ಸಮೇತವಾಗಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಹರವೆ ಗ್ರಾಮದಲ್ಲಿ ನಡೆದಿದೆ.

ಸಾಲಗಾರನ ಕಿರುಕುಳದಿಂದ ಬೇಸತ್ತು ಹರೀಶ್ (55) ಎನ್ನುವ ವ್ಯಕ್ತಿ ಬೈಕ್ ಸಮೇತ ಸಾಲಿಗ್ರಾಮ ತಾಲೂಕಿನ ಹೊಸಕೋಟೆ ಮತ್ತು ಮಳಲಿ ಗ್ರಾಮದ ಮಧ್ಯ ಭಾಗದಲ್ಲಿ ಇರುವ ಅರಣ್ಯ ಪ್ರದೇಶದಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಇವರು ಕಳೆದ ಎರಡು ತಿಂಗಳ ಹಿಂದೆ ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆ ಹೋಬಳಿ ದೊಡ್ಡ ಕೊಪ್ಪಲು ಗ್ರಾಮದಲ್ಲಿ ಸಿಮೆಂಟ್ ಮತ್ತು ಚಿಲ್ಲರೆ ಅಂಗಡಿ ನಡೆಸುತ್ತಿದ್ದರು. ಹುಣಸೂರು ಪಟ್ಟಣದ ವಾಲೆ ರವಿ ಅವರಿಂದ ಸಾಲ ಪಡೆದಿದ್ದು, ಆತನ ಒತ್ತಡ ತಾಳಲಾರದೆ ಮಂಗಳವಾರ ರಾತ್ರಿ ಬೆಂಕಿ ಹಚ್ಚಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ತಾನು ಆತ್ಮಹತ್ಯೆ ಮಾಡಿಕೊಳ್ಳುವ ಮುಂಚೆ ನನ್ನ ಸಾವಿಗೆ ವಾಲೆ ರವಿ ಎಂಬಾತನ ಒತ್ತಡವೇ ಕಾರಣ ಎಂಬ ಆಡಿಯೋ ಹರಿಯ ಬಿಟ್ಟಿದ್ದು, ಇದು ಸಾಕಷ್ಟು ವೈರಲ್ ಆಗಿದೆ. ಘಟನಾ ಸ್ಥಳಕ್ಕೆ ಸಾಲಿಗ್ರಾಮ ಪೊಲೀಸ್ ಇನ್ಸ್‌ಪೆಕ್ಟರ್‌ ಕೃಷ್ಣರಾಜು ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ದೂರು ದಾಖಲಾಗಿದೆ.

Latest Indian news

Popular Stories